ಈ ಪುಸ್ತಕದಲ್ಲಿ ವರ್ಣ, ಜಾತಿ, ವರ್ಗ, ಲಿಂಗ ಮತ್ತು ಜಾಗತಿಕ ಸಂದರ್ಭ ಗಳಲ್ಲಿ ಇವುಗಳ ಸಂಬಂಧವನ್ನು ವಿವರಿಸಲಾಗಿದೆ. ದಲಿತರ ಆಲೋಚನಾಕ್ರಮ, ಲೋಕದೃಷ್ಟಿ ಮತ್ತು ಅವುಗಳಿಂದ ನಿರ್ಮಾಣಗೊಂಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಪರಂಪರಾಗತವಾದ ದಲಿತ ಸಮಾಜವು ಆಧುನಿಕ ಸನ್ನಿವೇಶದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ಆಯಾಮಗಳನ್ನು ಪಡೆಯುವ ಸಂಗತಿಗಳನ್ನು, ಸಾಧ್ಯತೆಗಳನ್ನು ಮತ್ತು ಅವುಗಳಿಗಿರುವ ಆತಂಕಗಳನ್ನು ಇಲ್ಲಿನ ಲೇಖನಗಳು ಓದುಗರೊಡನೆ ಚರ್ಚಿಸುತ್ತವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ವರ್ಣ-ಜಾತಿ-ವರ್ಗ-ಲಿಂಗ-ಜಾಗತಿಕ ಸಂದರ್ಭ ,ದಲಿತ ಚಿಂತನ , ದಲಿತ ಸಾಹಿತ್ಯ ಮತ್ತು ಸಂಸ್ಕೃತಿ , ದಲಿತ ಚಳುವಳಿ ಮತ್ತು ಸಮಕಾಲೀನತೆ.
©2024 Book Brahma Private Limited.