ಲೇಖಕ ರಾಮಕೃಷ್ಣ ಮರಾಠೆ ಅವರ ತುಲನಾತ್ಮಕ ಅಧ್ಯಯನ ಕೃತಿ ʻಕನಕದಾಸರು ಮತ್ತು ಮಹಾರಾಷ್ಟ್ರದ ಸಂತರುʼ. ಕನ್ನಡ ಹರಿದಾಸ ಪರಂಪರೆಯಲ್ಲಿ ಕನಕದಾಸರ ಹೆಸರು ಬಹು ವಿಶಿಷ್ಟವಾದುದು. ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಆಧ್ಯಾತ್ಮ, ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಬಾಂಧವ್ಯ ಗತಕಾಲದಿಂದಲೂ ನಡೆದು ಬಂದಿದೆ. ಕರ್ನಾಟಕದ ಹರಿದಾಸ ಪರಪಂರೆ ಹಾಗೂ ಮಹಾರಾಷ್ಟ್ರದ ವಾರಕರಿ ಪಂಥದ ದಾರಿ ಭಾಷೆಯನ್ನು ಹೊರತು ಪಡಿಸಿದರೆ, ಚಿಂತನೆಯ ದಾರಿ ಒಂದೇ ಆಗಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮರಾಠೆ ಅವರು ಕನಕದಾಸರ ಜೀವನ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳು ಹೀಗೆ ವಿಭಿನ್ನ ನೆಲೆಯಲ್ಲಿ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಭಕ್ತಿ ಚಳುವಳಿ, ವಾರಕರಿ ಸಂಪ್ರದಾಯ, ಹರಿದಾಸ ಸಂಪ್ರದಾಯ, ಹಾಗೂ ಕನಕದಾಸರು- ಮಾರಾಠಿ ಸಂತರು ಶೀರ್ಷಿಕೆಗಳ ಲೇಖನಗಳಿವೆ.
©2024 Book Brahma Private Limited.