ಕಲ್ಯಾಣದ ಚಾಲುಕ್ಯರ ಇತಿಹಾಸ ಹಾಗೂ ಕೊಡುಗೆಗಳನ್ನು ಚರ್ಚಿಸುವ ಕೃತಿಯಿದು. ಈಗಿನ ಬೀದರ ಜಿಲ್ಲೆಯ ಬಸವ ಕಲ್ಯಾಣವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದ ಅರಸು ಮನೆತನ ಚಾಳುಕ್ಯರದು. ರಾಷ್ಟ್ರಕೂಟರ ನಂತರ ದಕ್ಷಿಣದ ಬಹು ಪ್ರಮುಖ ರಾಜ ಮನೆತನ. ಚಾಳುಕ್ಯ ದೊರೆಗಳು ಕನ್ನಡ-ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ತನ್ನ ಶಾಸನಗಳ ಮೂಲಕ ಗಮನ ಸೆಳೆದ ಆರನೇ ವಿಕ್ರಮಾದಿತ್ಯ, ಮಾನಸೊಲ್ಲಾಸ ವಿಶ್ವಕೋಶದ ಮೂಲಕ ಗಮನ ಸೆಳೆದ ಸೋಮೇಶ್ವರ ಸೇರಿದಂತೆ ಹಲವು ಪ್ರಮುಖ ಅರಸರು ಇತಿಹಾಸ, ಆಡಳಿತ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸತ್ಯನಾರಾಯಣ ಅವರು ಚಾಲುಕ್ಯರ ಚರಿತ್ರೆಯನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE