ಈ ಕೃತಿಯು ಬಂಜಾರ ಮಹಿಳೆಯರ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ರಾಜಕೀಯ ಸ್ಥಿತಿಯ ಕುರಿತ ಸಂಶೋಧನಾತ್ಮಕ ಪುಸ್ತಕವಾಗಿದೆ.. ದೇಶ ಹಾಗೂ ಕರ್ನಾಟಕ ರಾಜ್ಯದ ಬಂಜಾರ ಸಮುದಾಯದ ಪಕ್ಷಿನೋಟ, ಬಂಜಾರ ಮಹಿಳೆಯರ ಜೀವನ ಮತ್ತು ಸಮಸ್ಯೆ, ಶಿಕ್ಷಣ ಆರೋಗ್ಯ ಹಾಗೂ ಸಬಲೀಕರಣದ ಕುರಿತ ಸಂಶೋಧನಾತ್ಮಕ ಪ್ರಬಂಧವಾಗಿದೆ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE