ಮಹಾಭಾರತದ ಕುರಿತು ಈವರೆಗೆ ಕನ್ನಡದ ಹಲವು ಸಾಹಿತಿಗಳು ತಮ್ಮದೇ ವ್ಯಾಖ್ಯಾನದೊಂದಿಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಮಹಾಭಾರತದಲ್ಲಿ ಬರುವ ಪಾತ್ರಗಳ ಪ್ರತ್ಯೇಕ ದೃಷ್ಟಿಕೋನದೊಂದಿಗೆ ಬರೆಯಲಾದ ಹಲವು ಕೃತಿಗಳು ಮಹಾಭಾರತದ ಬಗೆಗಿನ ವಿಸ್ತೃತ ಆಯಾಮವನ್ನು ತೆರೆದಿಡುತ್ತವೆ. ಇದೇ ತೆರನಾದ ಇನ್ನೊಂದು ಕೃತಿ ಮಹಾಭಾರತದ ಕರ್ಣ.
ಪಂಪ ಮತ್ತು ಕುಮಾರವ್ಯಾಸರ ದೃಷ್ಟಿಯಲ್ಲಿ ಕರ್ಣನ ಪಾತ್ರ ಕಂಡ ಬಗ್ಗೆ ಜಯರಾಮರಾವ್ ಅವರು ರಚಿಸಿದ ಅಧ್ಯಯನ ಕೃತಿ ಇದು. ಮಹಾಭಾರತದಲ್ಲಿ ಅತ್ಯಂತ ಜಟಿಲವೆಂದು ಕಾಣಿಸುವ ಪಾತ್ರ ಕರ್ಣನದು. ಒಂದು ಕೋನದಿಂದ ಕರ್ಣ ಓರ್ವ ದುರಂತ ನಾಯಕನಂತೆ ಕಂಡರೂ ಇನ್ನೊಂದು ಕೋನದಿಂದ ಕರ್ಣನು ದುರ್ಯೋಧನನ್ನು ಬೆಂಬಲಿಸಿದ ದುರುಳ ಎಂಬ ಅಪವಾದ.
ಈ ಎರಡು ತುಮುಲಗಳ ನಡುವೆ ಕರ್ಣನ ನಿಜವಾದ ಪಾತ್ರವನ್ನು ಇದೇ ಎಂದು ನಿರ್ಧರಿಸಿ ಹೇಳುವುದು ಅತ್ಯಂತ ಕಷ್ಟಕರ. ಕೃತಿ ಕರ್ಣನ ದೂಷಣೆಗಾಗಿ ಬರೆದ ಪುಸ್ತಕವಲ್ಲ.ಇದೊಂದು ಪ್ರಬುದ್ಧ ಪ್ರಬಂಧ. ಕರ್ಣನ ಸಮಗ್ರ ಚರಿತ್ರೆಯನ್ನು ಮೂಲ ಭಾರತದ ಶಾಂತಿ ಪರ್ವದಲ್ಲಿ ಉಲ್ಲೇಖಿಸಲಾದ ವಿಚಾರವನ್ನು ಕೂಡ ಇಲ್ಲಿ ಚಿತ್ರಿಸಿದ್ದಾರೆ ಲೇಖಕರು.
ಲೇಖಕರು ಓರ್ವ ಖ್ಯಾತ ಗಮಕ ವಿದ್ವಾನ್ ಆಗಿದ್ದು, 67 ವರ್ಷಗಳಷ್ಟು ಸುಧೀರ್ಘ ಗಮಕಿಯಾಗಿ ಸೇವೆ ಸಲ್ಲಿಸಿದವರು. ಇವರು ಗಮಕ ಕಲೆಯ ವಾಚನ ವ್ಯಾಖ್ಯಾನದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರೂ, ಸಂಗೀತ ಕ್ಷೇತ್ರದಲ್ಲಿ ಅಪಾರವಾದ ವಿದ್ವತ್ತನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರೂ ಅವರ ವಿದ್ಯಾಭ್ಯಾಸಕ್ಕೂ ಅವರ ಪ್ರತಿಭೆಗೂ ಅಜಗಜಾಂತರ ವ್ಯತ್ಯಾಸ. ಇವರ ಗಮಕ ಕಲೆಯು ರಾಜ್ಯದ ಹಲವು ಖ್ಯಾತನಾಮ ಕವಿ, ಲೇಖಕರ ಪ್ರಶಂಸೆಗೆ ಒಳಗಾಗಿದೆ. ಗಮಕದ ಜೊತೆ ಜೊತೆಗೇ, ಸುಗಮ ಸಂಗೀತ ಹಾಗೂ ರಂಗ ಕ್ಷೇತ್ರದಲ್ಲೂ ಸಾಕಷ್ಟು ಪರಿಣಿತಿಯನ್ನು ಹೊಂದಿರುವ ರಾಯರು, ಅನೇಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ನೀಡಿದ್ದಾರೆ. ಕೇವಲ ಕರ್ನಾಟಕದಲ್ಲಿ ಅಲ್ಲದೇ ...
READ MORE