ದೀವರು, ಹಳೇ ಪೈಕರು (ಹಳೆಪೈಕರು ಹೆಂಡ ಇಳಿಸುವ ಜನಾಂಗದವರಾಗಿದ್ದಾರೆ) ದೀವರ ನಾಯಕರು, ಹಾಲ ಕ್ಷತ್ರಿಯರು, ಬಿಲ್ಲವರು ಮುಂತಾದ ಹಲವು ನಾಮಧೇಯಗಳಿಂದ ಗುರುತಿಸಲ್ಪಡುತ್ತಾರೆ. ಕರ್ನಾಟಕದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವೂ, ನಮ್ಮ ಜಾನಪದ ಸಿರಿವಂತಿಕೆಯ ಪ್ರಮುಖ ಭಾಗವೂ ಆಗಿರುವ ದೀವ ಸಮುದಾಯದ ಸಮಗ್ರ ಅವಲೋಕನವಾಗಿ ಈ ಕೃತಿ ಮೂಡಿಬಂದಿದೆ. ದೀವ ಜನಾಂಗದ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಸಂಸ್ಕ್ರತಿ, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಈ ವಿಷಯಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ನೀಡಲಾಗಿದೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಲೇಖಕ ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ರು ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ, ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಜಾನಪದ ಅಧ್ಯಯನದ ಮೂಲಕ ಹಲವಾರು ಸಂಶೋಧನೆಯನ್ನು ಮಾಡಿ ಕೃತಿಗಳ ಮೂಲಕ ಓದುಗರಿಗೆ ನೀಡಿದ್ದಾರೆ. ಜಾನಪದ ಸಿರಿವಂತಿಕೆಯ ಮುಖ್ಯ ಭಾಗವೂ ಆಗಿರುವ ದೀವ ಸಮುದಾಯದ ಸಮಗ್ರ ಅವಲೋಕನವನ್ನು ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ ಕೃತಿಯ ಮೂಲಕ ಪರಿಚಯಿಸಿದ್ದಾರೆ. ದೀವರ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಹೀಗೆ ಆ ಸಮುದಾಯದ ಒಂದು ತಲಸ್ಪರ್ಶಿ ಅಧ್ಯಯನವನ್ನು ಎನ್. ...
READ MORE