ಪಶುಪಾಲಕ ಜನಾಂಗದ ಕುರಿತು ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಯನ. ನಾಗರಿಕತೆ ಅಥವಾ ಸಂಸ್ಕೃತಿಗಳನ್ನು ಹುಟ್ಟುಹಾಕಿದವರೇ ಪಶುಪಾಲಕರು. ಅವರಿಂದಲೇ ದೇವಕಲ್ಪನೆ ಆರಂಭವಾಯಿತು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮುಂತಾದ ದೈವೀ ಕಲ್ಪನೆಗಳ ಹಿಂದೆ ಪಶುಪಾಲಕರ ಕುಲಕಸುಬುಗಳಾದ ಮೇಷಪಾಲನೆ, ಹೈನುಗಾರಿಕೆ ಮತ್ತು ಉಣ್ಣೆ ನೇಕಾರಿಕೆ ಮುಂ ಉಪಕಸುಬಿಗೆ ಕುಲದೇವತೆಗಳಾದವು.
ಮೂಲ ಮೇಷಪಾಲಕರಿಂದ ಕವಲೊಡೆದ ಅನೇಕ ಜಾತಿಗಳ ವಿವರಣೆ, ಮೇಷಪಾಲಕರಲ್ಲಿರುವ ಸು. 6000 ಗೋತ್ರಗಳಲ್ಲಿ 3500 ಗೋತ್ರಗಳ ಮಾಹಿತಿ, ಕುರುಬ ಕುಲಪುರುಷರಲ್ಲಿ ಪ್ರಮುಖರಾದ ಬಸವಣ್ಣ, ಅಕ್ಕನಾಗಮ್ಮ, ಛತ್ರಪತಿ ಶಿವಾಜಿ ಮುಂತಾದವರ ನಿಜಚರಿತ್ರೆ, ಮಹಾಭಾರತದ ಕೌರವರಿಂದ ಹಿಡಿದು ನಂದರು-ಮೌರ್ಯರು, ಅನಂತರ ಭಾರತದಲ್ಲಿ ಹೆಸರುವಾಸಿಗಳಾದ ಅರಸೊತ್ತಿಗೆಗಳ ಸಂಪೂರ್ಣ ವಿವರವನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. 2006ರಲ್ಲಿ ಮೊದಲ ಬಾರಿಗೆ ಮುದ್ರಣ ಆಗಿದ್ದ ಈ ಕೃತಿ 2011ರಲ್ಲಿ ಮರುಮುದ್ರಣಗೊಂಡಿದೆ.
ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು. ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...
READ MORE'Kanak gourav prashasti 'State govt award