“ಹಾಳಾಯಿತ್ತು ಕಲ್ಯಾಣ" ಗ್ರಂಥವು ಎಂ.ಎಸ್ ಸಿಂಧೂರ ಅವರ ಸಂಶೋಧನಾ ಕೃತಿಯಾಗಿದೆ. ಹನ್ನೆರಡನೆಯ ಶತಮಾನದ ಕಲ್ಯಾಣ ನಗರದಲ್ಲಿ ಘಟಿಸಿದ ಘಟನಾವಳಿಗಳನ್ನು, ವಚನಗಳು ಮತ್ತು ಹಲವು ಅಧಿಕೃತ ಸಾಕ್ಷಾಧಾರಗಳೊಂದಿಗೆ ಓದುಗರ ಕಣ್ಮುಂದೆ ಕಟ್ಟುವಂತೆ ರಚಿಸಿದ್ದಾರೆ. ಶರಣರ ಜೀವನ ದುರಂತದಲ್ಲಿ ಅಂತ್ಯ ಕಂಡ ಕುರಿತು ಯಾವ ಇತಿಹಾಸಕಾರರೂ ಪೂರ್ಣ ಸತ್ಯವನ್ನು ಹೊರತಂದಿಲ್ಲ ಎಂಬುದನ್ನು ಗಮನಿಸುವ ಲೇಖಕರು, ಕಲ್ಯಾಣದಲ್ಲಿ ಸಿಗುವ ಪ್ರತಿಯೊಂದು ಗುರುತುಗಳೂ ಒಂದೊಂದು ಕಥೆ ಹೇಳುವುದನ್ನು ಗ್ರಹಿಸುತ್ತಾರೆ. ಈ ಕೃತಿ ಒಂದು ಮಹತ್ವದ ಬರವಣಿಗೆ.
ಲೇಖಕ ಎಂ.ಎಸ್. ಸಿಂಧೂರ ಅವರು ಮೂಲತಃ ಬಾಗಲಕೋಟೆಯವರು. ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಉಳಿವಿಗಾಗಿ ಹೋರಾಡಿದವರು. ಕೃತಿಗಳು : ನಾ ಕಂಡ ಅಣ್ಣ ಬಸವಣ್ಣ ಪ್ರಶಸ್ತಿ-ಪುರಸ್ಕಾರಗಳು : ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ...
READ MORE