ಸಿರಿ ಪಾಡ್ದನ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಜನಪದ ಮಹಾಕಾವ್ಯ. ತುಳುನಾಡಿನ ಹಿರಿಮೆಯಾದ ಸಿರಿ ಪಾಡ್ದನವನ್ನು ಪ್ರಧಾನವಾಗಿರಿಸಿ ನಡೆಯುವ ಸಿರಿ ಆರಾಧನೆ ಧಾರ್ಮಿಕ ಆಚರಣೆಯ ಆಚೆಗೆ ನೆಲಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ವಿವಿಧ ಸಂಗ್ರಹಕಾರರ ಸಿರಿ ಪಾಡ್ದನಗಳನ್ನು ಒಗ್ಗೂಡಿಸಿ ಸಿರಿ ಬಳಗದ ಅಧ್ಯಯನ ಇಲ್ಲಿ ನಡೆದಿದೆ.
ತುಳು ಸಂಸ್ಕೃತಿ ಕುರಿತಂತೆ ಸಾಕಷ್ಟು ಕೆಲಸ ಮಾಡಿರುವ ವಿದ್ವಾಂಸೆ ಇಂದಿರಾ ಹೆಗ್ಗಡೆ ಕೃತಿಯ ಲೇಖಕಿ.
'ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ' ಕೃತಿಗಾಗಿ ಪಿಎಚ್.ಡಿ ಪದವಿ ಪಡೆದ ಇಂದಿರಾ ಹೆಗ್ಗಡೆ ಅವರ ಆಸಕ್ತಿಯ ಕ್ಷೇತ್ರ ತುಳು ಸಂಸ್ಕೃತಿ. ಕನ್ನಡ ಮತ್ತು ತುಳು ಸೃಜನಶೀಲ ಸಾಹಿತ್ಯದಲ್ಲೂ ಕೈಯಾಡಿಸಿದವರು ಅವರು. ದಕ್ಷಿಣ ಕನ್ನಡದ ಕಿನ್ನಿಗೋಳಿ ಎಳತ್ತೂರು ಗುತ್ತಿನವರಾದ ಇಂದಿರಾ ಅವರು ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ, ಚೇಳಾರು ಗುತ್ತು ಅಗೊಳಿ ಮಂಜಣ್ಣ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನ ಕೃತಿಗಳು ತುಳು ಜನಪದ ಸಾಹಿತ್ಯವನ್ನು ಪರಿಚಯಿಸುತ್ತವೆ. ಮೋಹಿನಿಯ ಸೇಡು, ಪುರುಷರೇ ...
READ MORE