ಅರಕೇರಿ ಅಮೋಘಸಿದ್ಧ ಒಂದು ಭಾಗದ ಮನಸೂರೆಗೊಂಡ ದೈವ. ಆತ 16ನೇಯ ಶತಮಾನದಲ್ಲಿ ಹೊಸದೊಂದು ಪಂಥವನ್ನು ರೂಪಿಸಿದ ಮಹಾ ಸಾಂಸ್ಕೃತಿಕ ನಾಯಕ. ಆ ನಾಯಕನ ಚರಿತ್ರೆಯನ್ನು ಡಾ. ಚನ್ನಪ್ಪ ಕಟ್ಟಿ ‘ಅಮೋಘಸಿದ್ಧ ಪರಂಪರೆ’ ಗ್ರಂಥದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಸ್ಥಳೀಯ ಚರಿತ್ರೆಗಳು ನಾಡಿನ ಸಂಸ್ಕೃತಿಕ ಮಹಾ ಕಥಗಳಿಗೆ ತಾಯಿ ಬೇರುಗಳಾಗಿರುವುದರಿಂದ, ಈ ಕೃತಿ ಮಹತ್ವದ್ದೆನಿಸುತ್ತೆ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE