ಲೇಖಕ ಡಾ. ಲಿಂಗದಹಳ್ಳಿ ಹಾಲಪ್ಪ ಅವರ ಕೃತಿ- ‘ಬಳ್ಳಾರಿ ಪರಿಸರದ ಹಾಲುಮತ ದೈವಗಳು’ ಈ ಕೃತಿಯು ಆರು ಅಧ್ಯಾಯಗಳಿವೆ. ಭೌಗೋಳಿಕ ಹಾಗೂ ಐತಿಹಾಸಿಕ ನೆಲೆಗಳ ವೈಶಿಷ್ಟ್ಯತೆ ಮತ್ತು ವೈವಿಧ್ಯತೆಗಳು, ಬಳ್ಳಾರಿ ಪದ ನಿಷ್ಪತ್ತಿಯನ್ನು ಶಾಸನ ಕಾವ್ಯ ಕೈಫಿಯತ್ತು ಪುರಾತತ್ವ ಜನಪದ ಮುಂತಾದ ಆಕರ ಸಾಮಗ್ರಿಗಳ ನೆರವಿನಿಂದ ಅಧ್ಮಯಯನ, ವೀರಪರಂಪರೆಯ ಪ್ರತಿನಿಧಿಗಳಾದ ಹಾಲುಮತ ದೈವಗಳ ಪರಿಸರ, ಆರಾಧನೆಯ ವಿಧಾನ, ಜಾತ್ರೆ-ಉತ್ಸವ ಮೆರವಣಿಗೆಗಳ ಅನನ್ಯತೆ, ಭಕ್ತಸಮೂಹದ ನಂಬಿಕೆ, ಸಾಂಸ್ಕೃತಿಕ ಸ್ಥಿತ್ಯಂತರಗಳ ತೌಲನಿಕ ಅಧ್ಯಯನವು ಈ ಕೃತಿ ಒಳಗೊಂಡಿದೆ. ವಿವಿಧ ಸಮುದಾಯ ಕೇಂದ್ರಿತ ದೈವಗಳನ್ನು ಅಧ್ಯಯನ ಮಾಡುವವರಿಗೆ ಈ ಕೃತಿ ಉಪಯುಕ್ತ.
ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ. ಕೃತಿಗಳು: ಹಾಲುಮತದ ಹಿರಿಮೆ ...
READ MORE