‘ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ’ ಲೇಖಕ ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರ ಸಂಶೋಧನಾ ಕೃತಿ. ಶಾಸನ ಮತ್ತು ಸಾಹಿತ್ಯಗಳೆರಡೂ ಸಂಸ್ಕೃತಿಯ ಉತ್ಪನ್ನಗಳು. ಈ ಎರಡೂ ಪ್ರಕಾರಗಳಲ್ಲಿ ಶಾಪ ಎಂಬ ಪರಿಕಲ್ಪನೆ ಹೇಗೆಲ್ಲಾ ಅಭಿವ್ಯಕ್ತವಾಗಿದೆ. ಅದು ಸಾಮಾಜದ, ಸಂಸ್ಕೃತಿಯ ಅವನತಿಗೆ ಮತ್ತು ಬೆಳವಣಿಗೆಗೆ, ಬದಲಾವಣೆಗೆ ಹೇಗೆ ಪೂರಕವಾಗಿ ಅಭಿವ್ಯಕ್ತವಾಗಿದೆ ಎಂಬ ವಿವರಗಳನ್ನೆಲ್ಲ ಸಂಗ್ರಹ ಮಾಡಿ, ಅವುಗಳನ್ನು ತೌಲನಿಕ ಅಧ್ಯಯನಕ್ಕೆ ಒಳಗು ಮಾಡಲಾಗಿದೆ. ಶಾಪಗಳ ವೈವಿಧ್ಯತೆ ಹಾಗೂ ಪರಿಣಾಮಗಳನ್ನು ಕುರಿತ ಎಲ್ಲ ಮಾಹಿತಿಗಳನ್ನು ವಿವರಗಳನ್ನು ವಿಶ್ಲೇಷಣೆಗೆ, ವ್ಯಾಖ್ಯಾನಕ್ಕೆ ಒಳಗು ಮಾಡುವ ಒಂದು ಪ್ರಕಟಿತ ಆಕರಗಳ ಮೂಲಕ ನಡೆಸಿದ ಅಧ್ಯಯನವಾಗಿದೆ. ಅನುಷಂಗಿಕ ಆಕರಗಳಿಗಿಂತ ಪ್ರೈಮರಿ ಆಕರಗಳ ಬಗ್ಗೆಯೇ ಹೆಚ್ಚು ಒತ್ತು ನೀಡಿ, ಅಂತಹ ಕಾವ್ಯಗಳನ್ನು, ಶಾಸನಗಳನ್ನು ಓದಿ, ಹುಡುಕುವ ಕೆಲಸವನ್ನು ಲೇಖಕರು ಮಾಡಿದ್ದಾರೆ.
©2024 Book Brahma Private Limited.