‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಡಾ.ಕುರುವ ಬಸವರಾಜ್ ಅವರ ಸಂಶೋಧನಾ ಪ್ರಬಂಧ. ಈ ಕೃತಿಗೆ ಡಾ.ಅಂಬಳಿಕೆ ಹಿರಿಯಣ್ಣ, ಡಾ.ಕೆ. ಚಿನ್ನಪ್ಪ ಗೌಡ, ಪ್ರೊ.ಕಿ.ರಂ. ನಾಗರಾಜ ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ಕನ್ನಡದ ಮೂರು ಮೌಖಿಕ ಕಾವ್ಯಗಳ ರಚನೆಗಳನ್ನು ಆಧರಿಸಿ ಕೇವಲ ದೈವಮೂಲ ನಂಬಿಕೆಗಳೇ ಅಲ್ಲದೇ ಕಾವ್ಯ ನಿರ್ಮಾಣದ ನೆಲೆಗಳನ್ನು ಮತ್ತು ಸಂವಹನದ ನೆಲೆಗಳನ್ನು ಕುರಿತು ಅಧ್ಯಯನ ನಡೆಸಿರುವುದು ಗಮನಾರ್ಹ, ಅಷ್ಟೇ ಅಲ್ಲ, ವ್ಯಕ್ತಿಗಾಯಕರ ಕಾವ್ಯಾಭಿವ್ಯಕ್ತಿಯ ಸಂದರ್ಭ, ಕಾವ್ಯವನ್ನು ಸಂಯೋಜಿಸುವ ಸ್ವರೂಪ ಹಾಗೂ ಅವುಗಳ ಪ್ರಸಾರದ ನೆಲೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿರುವುದು ಇಲ್ಲಿಯ ಹೆಚ್ಚುಗಾರಿಕೆ ಎಂದೇ ಹೇಳಬಹುದು ಎಂದಿದ್ದಾರೆ ಡಾ. ಅಂಬಳಿಕೆ ಹಿರಿಯಣ್ಣ. ಹಾಗೇ ವಾಕ್ ಪರಂಪರೆಯ ಮಾತು ಮಹಾಕಾವ್ಯದ ಹಂತವನ್ನು ಸಿದ್ಧಿಸಿಕೊಳ್ಳುವ ಪ್ರಕ್ರಿಯೆಯ ಚರ್ಚೆಯು ಇಲ್ಲಿ ಅರ್ಥಪೂರ್ಣವಾಗಿ ನಡೆದಿದೆ ಎನ್ನುತ್ತಾರೆ ಡಾ.ಕೆ. ಚಿನ್ನಪ್ಪ ಗೌಡ.
©2024 Book Brahma Private Limited.