ಬೌದ್ಧ ಧರ್ಮದ ಶೂನ್ಯವಾದ ಮತ್ತು ಶಂಕರಚಾರ್ಯರ ಅದ್ವೈತದ ಮಾಯಾವಾದಗಳ ತೌಲನಿಕ ಅಧ್ಯಯನವನ್ನು ಉದಯಕುಮಾರ ಹಬ್ಬು ಮಾಡಿದ್ದಾರೆ. ಗ್ರಂಥದಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ನಾಗಾರ್ಜುನನ ’ಮಧ್ಯಮಕ ಕಾರಿಕಾ’- ಒಂದು ಅನುಸಂಧಾನ, ಪಟಿಚ್ಚ ಸಮುತ್ಪಾದ (ಅವಲಂಬಿತ ಹುಟ್ಟು), ಚಿತ್ತಮಾತ್ರ ತತ್ವಶಾಸ್ತ್ರ, ಮಾಯಾವಾದ ಸಿದ್ಧಾಂತ, ಶಂಕರ ಮತ್ತು ಬೌದ್ಧಧರ್ಮದ ಸಂಬಂಧಗಳು, ಅವಲಂಬಿತ ಉದಯ ಅಥವಾ ಹುಟ್ಟು, ಮೂಲ ಸ್ವಭಾವದ ಶೂನ್ಯತೆ ಮತ್ತು ನಮ್ಮ ಬದುಕು, ವಿಪಲ್ಲಾಸಗಳು.
ಪುಸ್ತಕವನ್ನು ಕುರಿತು ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿಯಲ್ಲಿ ’ಬೌದ್ಧ ತಾರ್ಕಿಕನಾದ ನಾಗಾರ್ಜುನನ ನೆವದಲ್ಲಿ ಬೌದ್ಧಸಾಹಿತ್ಯ ಮತ್ತು ಅದ್ವೈತದ ಮಾಯಾಸಿದ್ಧಾಂತದ ಕುರಿತು ತೌಲನಿಕವಾಗಿ ಚಿಂತಿಸಿದ್ದಾರೆ. ಈ ಪುಸ್ತಕದ ಮುಖ್ಯವಿವೇಚನೆ ಬುದ್ಧನು ಹೇಳಿದ ಅಷ್ಟಾಂಗ ಮಾರ್ಗ ಮತ್ತು ನಾಲ್ಕು ಆರ್ಯಸತ್ಯಗಳನ್ನು ವಿವೇಚಿಸುವುದು, ವಿವರಿಸುವುದೂ ಆಗಿದೆ. ಶಂಕರರು ಜೀವ-ಜಗತ್ತು ಮತ್ತು ಈಶ್ವರ ತತ್ವಗಳ ಮೂಲಕ ಜಗತ್ ಮಿಥ್ಯಾ ತತ್ವವನ್ನು ಬ್ರಹ್ಮಸತ್ಯವನ್ನೂ ಸಾರುವ ವಿಚಾರಗಳನ್ನು ಕೊಟ್ಟು ಹಬ್ಬು ವಿವೇಚಿಸಿದ್ದಾರೆ. ಜಗತ್ ಮಿಥ್ಯವನ್ನು ಅತ್ತ ಬುದ್ಧ ಮತ್ತು ಇತ್ತ ಶಂಕರರು ಗೌಣವಾಗಿಸುತ್ತಾರೆ. ಆದರೆ, ಶಂಕರರು ಅದನ್ನು ಸ್ವಾನುಭವದ ಐಕ್ಯದಲ್ಲಿ ನೆಲೆ ನಿಲ್ಲಿಸುತ್ತಾರೆ. ಈ ವಿಚಾರಗಳನ್ನು ವಿಸ್ತಾರವಾಗಿಯೂ ತಕ್ಕಷ್ಟು ತಾತ್ವಿಕ ಪರಿಕರಗಳ ಮೂಲಕ ನಿರೂಪಿಸಲಾಗಿದೆ’.
©2024 Book Brahma Private Limited.