ರಸಾಯನ ವಿಜ್ಞಾನಿಗಳು

Author : ಹೆಚ್. ರಾಮಚಂದ್ರಸ್ವಾಮಿ

Pages 232

₹ 100.00




Year of Publication: 2002
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

`ರಸಾಯನ ವಿಜ್ಞಾನಿಗಳು’ ಎಚ್‌.ರಾಮಚಂದ್ರ ಸ್ವಾಮಿ ಅವರ ಸಂಶೋಧಾನಾತ್ಮಕ ಕೃತಿಯಾಗಿದೆ. ಲೂಯಿ ಪಾಶ್ಚರ್‌ ಹಾಗೂ ಎರಡು ಬಾರಿ ನೊಬೆಲ್‌ ದಕ್ಕಿಸಿಕೊಂಡ ಮೇರು ಪ್ರತಿಭೆ ಮೇರಿ ಕ್ಯೂರಿ ಈ ಇಬ್ಬರನ್ನು ಹೊರತು ಪಡಿಸಿ ಅಪೂರ್ವ ಸಾಧನೆಗೈದ ರಸಾಯನ ವಿಜ್ಞಾನಿಗಳನ್ನು ಪರಿಚಯಿಸುವ ಕೃತಿಯಾಗಿದೆ.

About the Author

ಹೆಚ್. ರಾಮಚಂದ್ರಸ್ವಾಮಿ

ಡಾ. ಹೆಚ್. ರಾಮಚಂದ್ರ ಸ್ವಾಮಿ ಅವರು ತಮ್ಮ ಸ್ನಾತಕ ಪದವಿ ಅಧ್ಯಯನ ಕಾಲದಲ್ಲಿ (1958-61) ಶ್ರೀ ಜೆ.ಆರ್. ಲಕ್ಷ್ಮಣರಾಯರ ವಿದ್ಯಾರ್ಥಿ. ಅವರಿಂದ ಸಾವಯವ ರಸಾಯನ ವಿಜ್ಞಾನದಲ್ಲಿ ಸ್ಫೂರ್ತಿ ಪಡೆದವರು. ಕರ್ನಾಟಕ ಹಾಗೂ ಭಾರತ ಸರಕಾರಗಳಿಂದ ಅನುದಾನಿತವಾಗಿದ್ದ ನಾಲ್ಕು ಬೃಹತ್ ಸಂಶೋಧನಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಶೃಂಗೇರಿಯ ಸುತ್ತಮುತ್ತಣ ಸಹಜ ಅರಣ್ಯಗಳ ಏಕಸಸ್ಯ ತೋಪುಗಳ, ಸೊಪ್ಪಿನ ಬೆಟ್ಟಗಳ, ಕೃತಕವಾಗಿ ಬೆಳೆಯಿಸಿದ ಅರಣ್ಯಗಳ ಜೀವಿ ಪರಿಸ್ಥಿತಿಯ ಹಾಗೂ ಮಣ್ಣುಗಳ ಅಧ್ಯಯನ ಮಾಡಿದವರು. ಕೃತಿಗಳು: ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು, ಇಂಧನಗಳು, ಗಾಳಿ ಮತ್ತು ಅನಿಲಗಳು, ಅಣು ಪರಮಾಣು ಮತ್ತು ಸಂಯುಕ್ತಗಳು ...

READ MORE

Reviews

ಹೊಸತು- ನವೆಂಬರ್‌- 2002

ಲೂಯಿ ಪಾಶ್ಚರ್ ಹಾಗೂ ಎರಡು ಬಾರಿ ನೊಬೆಲ್ ದಕ್ಕಿಸಿಕೊಂಡ ಮೇರು ಪ್ರತಿಭೆ ಮೇರಿ ಕ್ಯೂರಿ ಈ ಇಬ್ಬರನ್ನು ಹೊರತುಪಡಿಸಿ ಅಪೂರ್ವ ಸಾಧನೆಗೈದ ರಸಾಯನ ವಿಜ್ಞಾನಿಗಳನ್ನು ಪರಿಚಯಿಸುವ ಕೃತಿ, ರಸಾಯನ ವಿಜ್ಞಾನ ಪ್ರಾಚೀನ ರಸವಿದ್ಯಾಶಾಸ್ತ್ರದ ಮುಂದುವರಿಕೆ ಮಾತ್ರವಲ್ಲ, ಆಧುನಿಕ ರೂಪ. ಲೋಹಗಳನ್ನು ಚಿನ್ನವನ್ನಾಗಿಸುವ ಕನಸು ಕಂಡ ಪ್ರಾಚೀನ ವಿಜ್ಞಾನಿಗಳಿಗಿಂತ ಇಂದಿನ ವಿಜ್ಞಾನಿಗಳು ಚಿನ್ನಕ್ಕಿಂತಲೂ ಬೆಲೆ ಬಾಳುವ ಸಂಶೋಧನೆಗಳಿಂದ ಪ್ರಗತಿಯ ಮೆಟ್ಟಿಲೇರಿದ್ದಾರೆ.

Related Books