‘ಓಡಾಡುತ ಬಯಲು’ ಕೃತಿಯು ಗಿರೀಶ್ ಎಂ.ಬಿ. ಅವರ ಕೃತಿಯು ಮಕ್ಕಳ ನಾಟಕಗಳ ತಾತ್ತ್ವಿಕ ನೆಲೆಗಳನ್ನು ಒಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿ ನಾ ಡಿ.ಸೋಜ ಅವರು, ಒಂದು ಶತಮಾನದ ಮಕ್ಕಳ ಸಾಹಿತ್ಯದಲ್ಲಿ ನಾಟಕಗಳ ವಿಶೇಷತೆಯನ್ನು ಗುರುತಿಸಿರುವುದು ಈ ಸಂಶೋಧನಾ ಗ್ರಂಥದ ವಿಶೇಷ ಎಂದಿದ್ದಾರೆ. ಆನಂದ ವಿ. ಪಾಟೀಲ ಅವರು, ಗಿರೀಶ್ ಮೂಗ್ತಿಹಳ್ಳಿ ಅವರ ಪ್ರಬಂಧ ಹಲವಾರು ನಿಟ್ಟಿನಲ್ಲಿ ಅಧ್ಯಯನಾಸಕ್ತರನ್ನು ಸೆಳೆಯುತ್ತದೆ. ಬಹುಮುಖ್ಯವಾಗಿ ಇದು ತಾತ್ವಿಕ ಚಿಂತನೆಯನ್ನ ಮುಂದಿಟ್ಟುಕೊಂಡಿರುವುದು, ಕರ್ನಾಟಕದಲ್ಲಿಯೇ ವಿಭಿನ್ನ ಬಗೆಯ ನಾಟಕ ಎನ್ನುವುದಕ್ಕೆ ಒಂದು ಬಗೆಯ ನಿರ್ದಿಷ್ಟತೆ ಸ್ಪಷ್ವವಾಗಿ ಕಾಣಿಸದೇ ಇರುವುದರ ಸಂದರ್ಭದಲ್ಲಿ ಈ ಬಗೆಯ ಚರ್ಚೆಗಳು ಬಹು ಮಹತ್ವದ್ದು ಎನಿಸುತ್ತವೆ’ ಎಂದಿದ್ದಾರೆ.
ಎಂ.ಎನ್. ಮಹೇಶ್ ಅವರು, ‘ಈ ಸಂಶೋಧನೆಯು ವಿವರಣಾತ್ಮಕವೂ ಆಗಿದೆ. ರೂಪಿಸಿಕೊಂಡ ವಿಷಯ ಕುರಿತು ಸಂಶೋಧಕರು ಸಮಗ್ರವಾದ ಮಾಹಿತಿಗಳನ್ನು ಸಂಗ್ರಹಿಸಿ ಗಂಭೀರವಾದ ಅಧ್ಯಯನವನ್ನು ಮಾಡಿದ್ದಾರೆ. ಅವರ ಶ್ರಮ ಮತ್ತು ಉತ್ಸಾಹವನ್ನು ಮೆಚ್ಚಲೇಬೇಕು ಎಂದು ವಿವರಿಸಿದ್ದಾರೆ. ಸೋಮಣ್ಣ ಅವರು, ಅನುಬಂಧವನ್ನು ಹೊಸ ಬಗೆಯಲ್ಲಿ ಒಡಮೂಡಿಸಿರುವುದು ಸಂಶೋಧಕನ ಸೃಜನಶೀಲತೆಗೆ ಸ್ಥಾಪಿಸಲ್ಪಟ್ಟಂತಹ ಕೈಗನ್ನಡಿಯಂತೆ ಗೋಚರಿಸುತ್ತದೆ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.