ಲಕ್ಕಣ್ಣದಂಡೇಶ ಮತ್ತು ಶಿವತತ್ತ್ವ ಚಿಂತಾಮಣಿ

Author : ಡಿ.ವಿ. ಪರಮಶಿವಮೂರ್ತಿ

₹ 800.00




Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080- 22161900

Synopsys

ಲೇಖಕ ಡಿ.ವಿ. ಪರಮಶಿವಮೂರ್ತಿ ಅವರ ಕೃತಿ ʻಲಕ್ಕಣ್ಣದಂಡೇಶ ಮತ್ತು ಶಿವತತ್ತ್ವ ಚಿಂತಾಮಣಿʼ. ವಿಜಯನಗರ ಅರಸ ಪ್ರೌಢದೇವರಾಯನ ಮಹಾಮಂತ್ರಿಯಾದ ಲಕ್ಕಣ್ಣದಂಡೇಶ ಮತ್ತು ಅವನ ಶಿವತತ್ತ್ವ ಚಿಂತಾಮಣಿ ಕೃತಿಯ ಬಗ್ಗೆ ಇಲ್ಲಿ ಲೇಖಕರು ಸಂಶೋಧನಾತ್ಮಕ ಅಧ್ಯಯನ ಮಾಡಿ ಅನೇಕ ಹೊಸ ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ. ವೀರಶೈವ ಸಾಹಿತ್ಯದ ಮೇರು ಕೃತಿಯಾದ ಶಿವತತ್ತ್ವ ಚಿಂತಾಮಣಿ ಧರ್ಮ ಮತ್ತು ಸಾಹಿತ್ಯದ ಸಂಬಂಧಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

About the Author

ಡಿ.ವಿ. ಪರಮಶಿವಮೂರ್ತಿ

ಡಾ. ಡಿ.ವಿ.ಪರಮಶಿವಮೂರ್ತಿ, ಶಾಸನತಜ್ಞರು ಹಾಗೂ ಸಂಶೋಧಕರು. ತುಮಕೂರು ವಿ.ವಿ.ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಹೆಜ್ಜಾಜಿಯಲ್ಲಿ 1963ರಲ್ಲಿ ಜನಿಸಿದರು. ಬೆಂಗಳೂರು ವಿ.ವಿ.ಯಿಂದ ಎಂ.ಎ. ಕನ್ನಡ ಪದವೀಧರರು. ’ಕನ್ನಡ ಶಾಸನಶಿಲ' ಎಂಬ ಪ್ರೌಢಪ್ರಬಂಧಕ್ಕೆ ಪಿಎಚ್.ಡಿ.ಪಡೆದಿದ್ದಾರೆ.  ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಬೋಧನಾಮಂಡಳಿ ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕುಲಸಚಿವರಾಗಿ, ನಿರ್ದೆಶಕರಾಗಿ ವಿವಿಧ ಅಧ್ಯಯನ ಮಂಡಳಿಗಳಲ್ಲಿ  ತೊಡಗಿಸಿ ಕೊಂಡಿದ್ದಾರೆ. ಶಾಸನ ಸಂಶೋಧನೆ, ಪ್ರೌಢದೇವರಾಯನ ಶಾಸನಗಳು, ಕೃಷ್ಣದೇವರಾಯನ ಶಾಸನಗಳು, ನೊಳಂಬರ ಶಾಸನಗಳು, ತುಮಕೂರು ಜಿಲ್ಲೆ ಶಾಸನ ...

READ MORE

Related Books