ಸಂಗಮ ವಂಶದ ಹಕ್ಕ-ಬುಕ್ಕರು ವಿಜಯನಗರ ಸಮ್ರಾಜ್ಯ ಸ್ಥಾಪಕರು ಎಂಬ ಸಂಗತಿ ಪ್ರಚಾರ ಜನರಲ್ಲಿದೆ. ವಿಜಯನಗರವನ್ನು ಆಳಿದ ಸಾಳುವ, ತುಳುವ ಮತ್ತು ಅರವೀಡು ವಂಶಗಳೂ ಕುರುಬ ಜಾತಿಗೆ ಸೇರುತ್ತವೆ ಎಂಬ ಅಂಶವನ್ನು ಈ ಕೃತಿ ಪ್ರತಿಪಾದಿಸುತ್ತದೆ. ಬೇಡರ ಕುಲಕಸುಬು ಕುರಿಪಾಲನೆಯೇ ಆಗಿತ್ತು. ಬೇಢ ಎಂದರೆ ಕುರಿ; ಬೇಢಗಳನ್ನು ಕಾಯುವವರು ಬೇಢರು. ಬೇಡರು ಅಲೆಮಾರಿ ಕುರಿಗಾರರು. ಕುರುಬರು ಸ್ಥಾನಿಕ ಕುರಿಗಾರರು. ವೃತ್ತಿಯಲ್ಲಿ ಬೇಡರು-ಕುರುಬರು ಸಹೋದರಸಂಬಂಧಿಗಳು ಎನ್ನುವ ಲೇಖಕರು ಮುಮ್ಮಡಿ ಸಿಂಗೆ ನಾಯಕ, ಕಂಪಿಲರಾಯ ಮತ್ತು ಕುಮಾರರಾಮ ಇವರು ಮೂಲದಲ್ಲಿ ಕುರುಬರೇ ಆಗಿದ್ದಾರೆ ಎಂದು ಪ್ರತಿಪಾದಿಸುತ್ತಾರೆ. ವಿಜಾತಿ ಸ್ತ್ರೀಯರ ಸಂಬಂಧದಿಂದ ಜಾತಿಸಂಕರತೆ ಆಗಿ ಕುರುಬರು ಬೇಡರನ್ನು ದೂರ ಇಟ್ಟರು. ಆ ನಂತರ ಬೇಡ-ಕುರುಬರಲ್ಲಿ ಭೇದಗಳು ಕಂಡುಬಂದವು ಎಂದು ವಿವರಿಸುತ್ತಾರೆ.
©2024 Book Brahma Private Limited.