ಲೇಖಕ ಎಂ. ಪ್ರಭಾಕರ ಜೋಶಿ ಅವರ ಕೃತಿ ʻಕುಕ್ಕಿಲ ಸಂಪುಟʼ. ಈ ಪುಸ್ತಕವು ದಿ. ಕುಕ್ಕಿಲ ಕೃಷ್ಣ ಭಟ್ಟರ ಸಂಶೋಧನಾತ್ಮಕ ಲೇಖನಗಳ ಸಂಕಲನವಾಗಿದೆ. ಇಲ್ಲಿ ಎರಡು ಭಾಗಗಳಿವೆ. ಅದರಲ್ಲಿ, ಮೊದಲ ಭಾಗವು ಕುಕ್ಕಿಲರ ಪ್ರಕಟಿತ ಹಾಗೂ ಅಪ್ರಕಟಿತ ಲೇಖನಗಳಿದ್ದರೆ ಎರಡನೆಯ ಭಾಗವಾದ ʻಕುಕ್ಕಿಲ ಪ್ರಶಸ್ತಿ'ಯಲ್ಲಿ ಅವರನ್ನು ಹತ್ತಿರದಿಂದ ಬಲ್ಲ ನಾಲ್ಕಾರು ಮಹನೀಯರು ಬರೆದ ಸಂಸ್ಮರಣ ಲೇಖನಗಳಿವೆ.
ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...
READ MORE