ಸಾಹಿತಿ, ಸಂಶೋಧಕ, ಸ್ವಾತಂತ್ಯ್ರ ಹೋರಾಟಗಾರ ’ಕಪಟರಾಳ ಕೃಷ್ಣರಾಯರ ಜೀವನ ಮತ್ತು ಸಂಸ್ಕೃತಿ ಸಂಶೋಧನಾ ಲೇಖನಗಳು’ ಪುಸ್ತಕ ಕಪಟರಾಳರ ಸಾಹಿತ್ಯ ಕೊಡುಗೆ, ಸಾಮಾಜಿಕ ಜೀವನದ ಬಗ್ಗೆ ಸಂಪೂರ್ಣ ಚಿತ್ರಣ ಇರುವ ಅಪರೂಪದ ಕೃತಿ ಇದು.
ಮಹಾನುಭಾವ ಪಂಥ ಮತ್ತು ಶಿವಾನುಭವ ಪಂಥಗಳ ಹಿನ್ನೆಲೆ, ವೀರಶೈವರಲ್ಲಿ ಇರುವ ಸಾಂಪ್ರದಾಯಿಕ ಭೇದದ ಬಗ್ಗೆ, ಅಲ್ಲಮಪ್ರಭು ಮತ್ತು ನಾಥ ಸಂಪ್ರದಾಯ, ಬಸವೇಶ್ವರರ ವಂಶಕ್ರಮ, ಅನುಯಾಯಿ, ಪಂಥ ವಿಚಾರ, ಬಸವ ಬಿಜ್ಜಳರ ಇತಿಹಾಸದ ಪುನರ್ವಿಮರ್ಶೆ, ಸ್ತ್ರೀ ಸ್ವಾತಂತ್ಯ್ರ, ಸಾವಳಗಿ ಶಿವಲಿಂಗೇಶ್ವರ ಚರಿತ್ರೆ, ವೀರಶೈವ ಸಂಶೋಧನೆ, ಶಿವಾನುಭವ ಮಂಟಪದ ಬಗ್ಗೆ ಪ್ರಸ್ತಾಪ ಇವೆಲ್ಲವುಗಳ ಕುರಿತಾದ ಲೇಖನ, ಹಿನ್ನೆಲೆ, ಚರ್ಚೆಗಳನ್ನೊಳಗೊಂಡ ಅಂಶಗಳನ್ನು ಕಪಟರಾಳರು ಬರೆದಿದ್ದಾರೆ.
ಇವುಗಳಷ್ಟೇ ಅಲ್ಲದೇ ’ಹಳಗನ್ನಡ ಹೊಸಗನ್ನಡ’ ದ ಬಗ್ಗೆ ಐತಿಹಾಸಿಕ ವಿವೇಚನೆಯ ಕುರಿತಾದ ಲೇಖನ, ಕನ್ನಡ ಶಾಸನಗಳ ಅಭ್ಯಾಸದ ಕ್ರಮ, ವಸ್ತು ಸಂಗ್ರಹ, ಹರಿದಾಸರ ಪರಂಪರೆ, ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಕಪಟರಾಳರ ಕೃತಿ ’ಮಗಳಿಗೆ ತಂದೆಯ ಓಲೆಗಳು’, ಸಾವಾಸಿಗಳು ಕಾಶ್ಮೀರ ದೇಶದ ಬ್ರಾಹ್ಮಣರು ಹೀಗೆ ಹಲವಾರು ವಿಭಿನ್ನ ವಸ್ತು ವಿಷಯಗಳನ್ನು ಒಳಗೊಂಡ ಅಪರೂಪದ ಪುಸ್ತಕ ’ಕಪಟರಾಳ ಕೃಷ್ಣರಾಯರ ಜೀವನ ಮತ್ತು ಸಂಸ್ಕೃತಿ, ಸಂಶೋಧನಾ ಲೇಖನಗಳು’.
ಕೃಷ್ಣರಾಯರ ಜೀವನ ಮತ್ತು ಸಂಸ್ಕೃತಿ, ಅವರ ಸಂಶೋಧನಾ ಲೇಖನಗಳನ್ನು ಒಂದೆಡೆ ಸೇರಿಸಿ, ಸಮಗ್ರ ಸಾಹಿತ್ಯ ಮಾಲೆಯಲ್ಲಿ ಹೊರತಂದು ಸಂಪಾದನೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಪ್ರೊ. ಎಂ.ಧ್ರುವನಾರಾಯಣರ ಕಾರ್ಯ ಮೆಚ್ಚುವಂತದ್ದು.
©2024 Book Brahma Private Limited.