‘ಕನ್ನಡ ಸಾಹಿತ್ಯ ಚರಿತ್ರೆ’ಯ ಮುಂದುವರಿಕೆ ಕೃತಿಯು ಶ್ರೀನಿವಾಸ ಹಾವನೂರ ಸಂಪಾದಕತ್ವದ ಕನ್ನಡ ನವೋದಯದ ಕಾಲದ ಪ್ರಸಿದ್ದ ವ್ಯಕ್ತಿ, ವಿಚಾರಗಳ ಕುರಿತ ಬರವಣಿಗೆಯಾಗಿದೆ. ಹಿರಿಯ ವಿದ್ವಾಂಸ ಡಾ. ರಂ. ಶ್ರೀ. ಮುಗಳಿ ಅವರು ಕನ್ನಡ ಸಾಹಿತ್ಯದ ಚರಿತ್ರೆಯನ್ನು ಬರೆದಿದ್ದು, ಅದರ ಮುಂದುವರಿದ ವಿಚಾರಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ.
ಈ ಕೃತಿಯು ಇತಿಹಾಸದ ಪ್ರಸಿದ್ದ ವ್ಯಕ್ತಿಗಳನ್ನು ವಿವರಿಸುತ್ತಾ ಅವರ ಸಾಹಸ ಹಾಗೂ ಬದುಕಿನ ನೋಟವನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ಲೇಖಕ, ರಾಘವಾಂಕನಲ್ಲಿದ್ದ ನಾಟ್ಯ ಪ್ರತಿಭೆಯನ್ನು ವಿಶ್ಲೇಷಿಸುತ್ತಾರೆ. ಈ ಕೃತಿಯು 16 ಅಧ್ಯಾಯಗಳಾದ ಹಳಗನ್ನಡ ಕಾವ್ಯ ನೋಟ, 1ನೆಯ ಗುಣವರ್ಮನ ‘ಶೂದ್ರಕ’, ನಯಸೇನನ ಧರ್ಮಾವೃತ, ರಾಘವಾಂಕನ ನಾಟ್ಯ ಪ್ರತಿಭೆ, ಅಂಡಯ್ಯನ ‘ಕಬ್ಬಿಗರ’ ಕಾವ್ಯ, ನಾಗರಾಜನ ಪುಣ್ಯಸ್ರಾವ, ಮಹಾದೇವಿಯಕ್ಕನ ಸಾಂಗತ್ಯ, ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯದ ಕಾಣಿಕೆ, ಕುಮಾರವ್ಯಾಸ ಭಾರತದ ಹಿರಿಮೆ, ಷಡಕ್ಷರದೇವನಳ್ಳಿ ವಾತ್ಸಲ್ಯ ರಸ, ಕನಕದಾಸರು(ವ್ಯಕ್ತಿ ವಾಙ್ಞಯ ಮತ್ತು ಜೀವನ ಸಂದೇಶ), ಸರ್ವಜ್ಞನ ಕೊಡುಗೆ, ತಿರುಮಲ್ಯಾರ ಮತ್ತು ಚಿಕದೇವರಾಯ ವಂಶಾವಳಿ, ಹೊನ್ನಮ್ಮನ ಹದಿಬದೆಯ ಧರ್ಮ(ಕೆಲವು ಸಂದೇಶಗಳು), ಬಸವಪ್ಪಶಾಸ್ತ್ರಿಗಳ ಕಾವ್ಯಪ್ರತಿಭೆ, ಮುದ್ಧಣ ಕವಿಯ ‘ರಾಮಾಶ್ವಮೇಧ’ ಇವೆಲ್ಲವನ್ನು ಒಳಗೊಂಡಿದೆ.
©2024 Book Brahma Private Limited.