ಹಸ್ತಪ್ರತಿ ಅಧ್ಯಯನ, ಕರಾರುವಕ್ಕಾದ ವಿಶ್ಲೇಷಣೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ಎಂಬಂತಿದೆ ಈ ಕೃತಿ. ಡಾ. ಎಂ.ಎಂ. ಕಲಬುರ್ಗಿ ಕೃತಿಯ ಪ್ರಧಾನ ಸಂಪಾದಕರು. ಗ್ರಂಥ ರಚನೆಯಲ್ಲಿ ವೀರಣ್ಣ ರಾಜೂರ ಅವರ ಶ್ರಮವನ್ನೂ ಮರೆಯುವಂತಿಲ್ಲ. ಬಹುತೇಕ ನನೆಗುದಿಗೆ ಬಿದ್ದಿದ್ದ ಹಸ್ತಪ್ರತಿ ಅಧ್ಯಯನ ಕಾರ್ಯಕ್ಕೆ ಮತ್ತೆ ಜೀವ ಒದಗಿಸಿದ ಹಿನ್ನೆಲೆಯೂ ಕೃತಿಗೆ ಇದೆ. ಸಂಸ್ಕೃತ ಹಸ್ತಪ್ರತಿಗಳಿಗೆ ಬದಲು ಕನ್ನಡ ಹಸ್ತಪ್ರತಿಗಳಿಗೆ ಆದ್ಯತೆ ನೀಡಿದ್ದರಿಂದ ೬ರಿಂದ ೧೦ನೇ ಸಂಪುಟದವರೆಗಿನ ಐದು ಸಂಪುಟಗಳು ಮೊದಲು ಪ್ರಕಟಗೊಂಡಿವೆ.
©2024 Book Brahma Private Limited.