ಹೊಯ್ಸಳರ ಇತಿಹಾಸ ಎನ್ನುವ ಈ ಕೃತಿಯಲ್ಲಿ ಪಾರಂಪರಿಕ ಹಾಗೂ ಐತಿಹಾಸಿಕ ದಾಖಲೆಗಳ ಸಮೇತ ಅದ್ಯಾಯ ಗಳನ್ನು ಬರೆದು ಲೇಖಕಿ ಡಾ. ಎನ್. ಸರಸ್ವತಿಯವರು ಇತಿಹಾಸಕಾರರ ಹಾಗೂ ಓದುಗರ ಗೌರವಕ್ಕೆ ಭಾಜನರಾಗಿದ್ದಾರೆ. ಹೊಯ್ಸಳರು ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದಲ್ಲಿದ್ದ ಪ್ರಮುಖ ರಾಜ ವಂಶದವರು. "ಸಳ" ನೆಂಬ ಮೂಲ ಪುರುಷನಿಂದ ಈ ವಂಶದ ಉಗಮವಾಯಿತೆಂದು ಹೇಳಲಾಗಿದೆ. ಇಂದಿನ ಮೂಡಗೆರೆಯನ್ನು ಅಂದಿನ "ಸೊಸೆವೂರು" ಎಂದು ಕರೆಯಲಾಗುತ್ತಿತ್ತು.
ಎನ್. ಸರಸ್ವತಿ ಅವರು ಸನಾತನ ಧರ್ಮ ಕಾಲೇಜಿನ ಇಂಗ್ಲಿಷ್ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗದಲ್ಲಿ ಪ್ರಭಾರಿ ಪ್ರಾಂಶುಪಾಲರು ಮತ್ತು ಸಹ ಪ್ರಾಧ್ಯಾಪಕರಾಗಿದ್ದಾರೆ. ಅವರು ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತಗಳಲ್ಲಿ 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ...
READ MORE