ಹೊಸತು ಹೊಸತು

Author : ಎಂ. ಚಿದಾನಂದಮೂರ್ತಿ

Pages 484

₹ 550.00

Buy Now


Year of Publication: 1993
Published by: ಸಪ್ನ ಬುಕ್‌ ಹೌಸ್‌
Address: ಗಾಂಧಿನಗರ ಬೆಂಗಳೂರು

Synopsys

ನಾಡಿನ ಖ್ಯಾತ ಸಂಶೋಧಕರಲ್ಲಿ ಒಬ್ಬರಾದ ಡಾ. ಎಂ.ಚಿದಾನಂದಮೂರ್ತಿ ಅವರ ಸಂಶೋಧನಾ ಲೇಖನಗಳ ಸಂಕಲನ ಇದಾಗಿದ್ದು ಇಲ್ಲಿರುವ 50 ಲೇಖನಗಳು ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಗ್ರಹಿಸಲು ಅವಕಾಶ ಮಾಡಿಕೊಡುತ್ತವೆ. ಸಂಶೋಧಕರು ವಿವಿಧ ಜ್ಞಾನಶಿಸ್ತುಗಳ ಆಕರಗಳನ್ನು ವಿವರಣೆಗಳನ್ನು ಇಲ್ಲಿ ವಿಷಯ ವಿಶ್ಲೇಷಣೆಗಾಗಿ ಬಳಸಿಕೊಂಡಿದ್ದು ಕನ್ನಡ ಅಧ್ಯಯನ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಪುನಾರಚನೆಯ ಮಾದರಿಗೆ ಇಲ್ಲಿನ ಸಂಪ್ರಬಂಧಗಳು ಉತ್ತಮ ನಿದರ್ಶನವಾಗಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ; ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ , ಮಾರ್ಗಕವಿ ಪರಂಪರೆ , ಹಳೆಗನ್ನಡ ಕವಿ-ಕಾವ್ಯಗಳ ವಿಮರ್ಶೆ , ಗ್ರಾಮದೇವತೆಗಳು-ಗ್ರಾಮದೇವತೆ , ಗ್ರಂಥಸಂಪಾದನೆ, ಸಂಶೋಧನೆ ಮತ್ತು ವಿಮರ್ಶೆ , ಕರ್ನಾಟಕ ಇತಿಹಾಸ ಸಂಬಂಧಿ ವಿಚಾರಗಳು , ಹಂಪಿ ಇತಿಹಾಸಸಂಬಂಧಿ ಲೇಖನಗಳು , ಇತರ ವೈಚಾರಿಕ ಲೇಖನಗಳು.

ಮೊದಲು ಈ ಪುಸ್ತಕವು ಹಂಪಿ ಕನ್ನಡ ವಿಶ್ವವಿದ್ಯಾಲಯ. ಪ್ರಸಾರಾಂಗದಿಂದ ಪ್ರಕಟವಾಗಿತ್ತು.

 

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books