‘ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ’ ಲೇಖಕ ಡಾ. ಹರಿಕೃಷ್ಣ ಭರಣ್ಯ ಅವರ ಕೃತಿ. ಹೊಸಗನ್ನಡ ಸಾಹಿತ್ಯದ ಪ್ರತಿಯೊಂದು ಪ್ರಕಾರದಲ್ಲೂ ಮೊದಲು ವ್ಯವಸ್ಥಿತವಾಗಿ ಹುಡುಕುವ ಕೆಲಸ, ಲೇಖಕರ ಅಸಾದ್ಯ ಪರಿಶ್ರಮಗಳು ಇದರಲ್ಲಿ ಎದ್ದುಕಾಣುವ ಅಂಶಗಳಾಗಿವೆ. ಅಲ್ಲದೆ ಹೊಸಗನ್ನಡ ಸಾಹಿತ್ಯದ ಆರಂಭದ ಚರಿತ್ರೆಯನ್ನು ಹಾಗೂ ಹಿನ್ನೆಲೆಗಳನ್ನು ವ್ಯವಸ್ಥಿತವಾಗಿ ಅಷ್ಟೇ ಅಧಿಕೃತವಾಗಿ ಹೇಳುವಲ್ಲಿ ಈ ಕೃತಿಗೆ ಪ್ರತ್ಯೇಕವಾದ ಹಾಗೂ ಗಮನಾರ್ಹ ಸ್ಥಾನವಿದೆಯೆನ್ನುವುದರಲ್ಲಿ ಸಂದೇಹವೇ ಇಲ್ಲ. ಹೊಸ ವಿಧಾನದ ಮೂಲಕ ಲೇಖಕರು ಹೇಳಲು ಹೊರಟ ಈ ಸಂಶೋದನೆಯು ಹೊಸಗನ್ನಡ ಸಾಹಿತ್ಯದ ಚರಿತ್ರೆಯ ಪುನರ್ನಿರ್ಮಾಣದಲ್ಲಿ ಒಂದು ಉಪಯುಕ್ತ ಕೃತಿಯಾಗಿದೆ.
©2024 Book Brahma Private Limited.