ವರಕವಿ ದ.ರಾ ಬೇಂದ್ರೆ ಅವರ ಕಾವ್ಯ ವಿಮರ್ಶೆಯನ್ನು ಡಾ, ಜಿ, ಕೃಷ್ಣಪ್ಪ ಅವರು ’ಹಸಿರು ಹಚ್ಚಿ ಚುಚ್ಚಿ’ ಕೃತಿಯ ಮೂಲಕ ಹೊರತಂದಿದ್ದಾರೆ.
ಬೇಂದ್ರೆ ಕಾವ್ಯವು ಕೃಷ್ಣಪ್ಪನವರಿಗೆ ಒಂದು ವಿಸ್ಮಯವೇ ಸರಿ. ಬೇಂದ್ರೆ ಕಾವ್ಯದ ಜೀವನ ದರ್ಶನವನ್ನು ತಮ್ಮ ಜೀವನದ ತೊಟ್ಟಿಲಿಗೆ ತೂಗಿ ಅರ್ಥೈಸುವ ಲೇಖಕ ಕೃಷ್ಣಪ್ಪನವರ ಕಾವ್ಯ ವಿಮರ್ಶೆ ಬೆರಗು ಹುಟ್ಟಿಸುವಂತದ್ದು ಮತ್ತು ಅಷ್ಟೇ ಆತ್ಮೀಯವಾಗುವಂತದ್ದು. ಬೇಂದ್ರೆ ಕಾವ್ಯವನ್ನು ಗ್ರಹಿಸಿ ಬರೆಯುವ ಕೃಷ್ಣಪ್ಪನವರ ವಿಮರ್ಶೆ ವ್ಯಾಪಕವಾಗಿ ಓದುಗರಿಗೆ ತಲುಪುತ್ತದೆ.
ಬೇಂದ್ರೆ ಕಾವ್ಯವು ಕನ್ನಡ ನೆಲದ ಬಹು ಸಂಸ್ಕೃತಿಯ ವಿವಿಧ ಮಿಡಿತಗಳನ್ನು ಒಳಗೊಂಡದ್ದು. ಜನಪದರು ಬಳಸುವ ದೇಸಿಪದಗಳು ಅವರ ಜೀವನಾನುಭವದ ರೂಪವಾಗಿದ್ದು, ಅವು ಅವರ ಮಾನಸಿಕ ಪಕ್ವತೆಯ, ಪ್ರಬುದ್ದತೆಯ ಪ್ರತೀಕವಾಗಿದೆ. ಇವರ ಕಾವ್ಯದ ಹಿನ್ನೆಲೆಯನ್ನು ಸಮರ್ಥವಾಗಿ, ಸೂಕ್ಷ್ಮ ಅಧ್ಯಯನ ಮಾರ್ಗದಲ್ಲಿ ಕೃಷ್ಣಪ್ಪನವರು ತಮ್ಮ ವಿಮರ್ಶಾ ಲೇಖನಗಳಲ್ಲಿ ತಂದಿದ್ದಾರೆ.
©2024 Book Brahma Private Limited.