ಭಾರತೀಯ ಕ್ಷಾತ್ರಪರಂಪರೆ ಐತಿಹಾಸಿಕ ಸಂಶೋಧನಾ ಪುಸ್ತಕವನ್ನು ಲೇಖಕ ಶತಾವಧಾನಿ ಆರ್. ಗಣೇಶ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತೀಯರು ಅಥವಾ ಹಿಂದುಗಳು ಆಕ್ರಮಣಶೀಲರಲ್ಲ ಹಾಗೂ ಸೌಮ್ಯಸ್ವಭಾವದವರು ಎಂಬ ಭಾವನೆ ಎಷ್ಟು ಸತ್ಯವೋ ಅವರು ಆಕ್ರಮಕರನ್ನು ಎದುರಿಸುವಾಗ ಅಸೀಮ ಶೌರ್ಯವನ್ನು ಮೆರೆದಿದ್ದಾರೆಂಬುದೂ ಅಷ್ಟೇ ಸತ್ಯ. ಇದಕ್ಕೆ ಭಾರತದಲ್ಲಿ ಬ್ರಾಹ್ಮ ಮತ್ತು ಕ್ಷಾತ್ರಗಳೆರಡೂ ಸಮನ್ವಿತವಾಗಿರುವುದೇ ಕಾರಣ. ವೇದಕಾಲದಿಂದ ಈವರೆಗೆ ಭಾರತೀಯ ಶೌರ್ಯ ಅಥವಾ ಕ್ಷಾತ್ರ ಪರಂಪರೆ ಹೇಗೆ ಬೆಳೆದುಬಂತು ಎಂಬುದನ್ನು ತಮ್ಮ ಗಾಢ ಅಧ್ಯಯನದ ಮೂಲಕ ಶತಾವಧಾನಿ ಆರ್. ಗಣೇಶ್ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
©2024 Book Brahma Private Limited.