ಬಸವಣ್ಣನವರನ್ನು ಕುರಿತ ಶಾಸನಗಳು

Author : ಎಂ.ಎಂ. ಕಲಬುರ್ಗಿ

Pages 60




Year of Publication: 1968
Published by: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ
Address: ಧಾರವಾಡ

Synopsys

ಕಲಬುರ್ಗಿಯವರ ಮೊದಲ ಪ್ರಕಟಿತ ಪುಸ್ತಕ ’ಬಸವಣ್ಣನವರನ್ನು ಕುರಿತು ಶಾಸನಗಳು’. ಅವರು ಶಾಸನಗಳನ್ನು ಕುರಿತು ರಚಿಸಿದ ಮೊದಲ ಗ್ರಂಥವೂ ಇದೇ. ನಾಡಿನಲ್ಲಿ ದೊರೆತ ಹನ್ನೊಂದು ಶಾಸನಗಳ ಆಧಾರದ ಮೇಲೆ ಬಸವಣ್ಣನ ಜೀವನ ಮತ್ತು ಲಿಂಗಾಯತ ಧರ್ಮದ ತಾತ್ವಿಕತೆಯನ್ನು ಗ್ರಂಥ ಶೋಧಿಸುತ್ತದೆ. ಬಸವಣ್ಣ ಸೇರಿದಂತೆ ಶರಣರ ಐತಿಹಾಸಿಕ ಅಸ್ತಿತ್ವದ ಪ್ರಶ್ನೆಗಳು ಎದ್ದಾಗ ಮೂಡಿಬಂದ ಈ ಕೃತಿಗೆ ತನ್ನದೇ ಆದ ಚಾರಿತ್ರಿಕ ಮಹತ್ವ ಕೂಡ ಇದೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books