‘ಆಕರಗಳು ಶೋಧ-ಪರಿಶೋಧ’ ಡಾ.ಕೆ. ರವೀಂದ್ರನಾಥ ಅವರ ಸಂಶೋಧನ ಲೇಖನಗಳ ಸಂಕಲನ. ಸಂಶೋಧನ ಶಾಸ್ತ್ರಗಳನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸಲು ಶಾಸ್ತ್ರಗಳೊಡನೆ ಸಾಹಿತ್ಯದ ಅಧ್ಯಯನದಿಂದ ಮಾತ್ರ ಸಾಧ್ಯ. ಪ್ರಾಚೀನ ಗ್ರಂಥಗಳ ತಲಸ್ಪರ್ಶಿ ಅಧ್ಯಯನದ ಹಿನ್ನೆಲೆ ಇದ್ದರಷ್ಟೆ ಯಾವುದೇ ಕಾವ್ಯಕೃತಿಯ ಒಡಲನ್ನು ಬಗೆದು ಗರ್ಭವನ್ನು ಶೋಧಿಸುವ ಕಾರ್ಯ ಸಫಲಗೊಂಡೀತು.
ಪ್ರಸ್ತುತ ಸಂಶೋಧನ ಲೇಖನಗಳ ಸಂಪುಟವಾಗಿ ಹೊರಬರುತ್ತಿರುವ ಆಕರಗಳು: ಶೋಧ-ಪರಿಶೋಧವನ್ನು ಪರಾಮರ್ಶಿಸಿದಾಗ ವ್ಯಕ್ತಪಡಿಸುವ ಅನಿಸಿಕೆಯೇ ಇದು. ಸಾಹಿತ್ಯ-ಭಾಷೆ-ವಿಷಯಗಳ ಆದ್ಯಂತ ಅಧ್ಯಯನದ ತರುವಾಯ ವಿಷಯವನ್ನು ಹಲವು ನಿಟ್ಟಿನಿಂದ ವಿಮರ್ಶಿಸಲು ಡಾ. ಕೆ. ರವೀಂದ್ರನಾಥ ಅವರಿಗೆ ಇಲ್ಲಿ ಸಾಧ್ಯವಾಗಿರುವುದು ವಿಷಯದ ಆಯ್ಕೆ, ಅದನ್ನು ಪ್ರವೇಶಿಸಲು ಬೇಕಾದ ಸಿದ್ಧತೆ, ವ್ಯವಸ್ಥಿತ ನಿರೂಪಣೆ, ಸಮರ್ಥನೆಯ ವಿಧಾನ, ನಿರ್ಣಯಸಾಮರ್ಥ್ಯ-ಇವುಗಳ ಅನುಸರಣೆಯಿಂದಲೂ ಈ ಕೃತಿಯು ಗಮನಾರ್ಹ.
©2024 Book Brahma Private Limited.