ನಟರಾಜು ಜೆ. ಆರ್ ಅವರು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಜೋಗಿಹಳ್ಳಿಯವರು. ತಂದೆ- ರಂಗಯ್ಯ, ತಾಯಿ- ರಂಗಮ್ಮ. ಕನ್ನಡ ಎಂ.ಎ, ಚರಿತ್ರೆ, ಎಂ.ಇಡಿ. ಪಿಎಚ್.ಡಿ, ಎನ್.ಇ.ಟಿ, ಜೆ.ಆರ್.ಎಫ್, ಟಿ.ಇ.ಟಿ ಪೂರ್ಣಗೊಳಿಸಿರುವ ಇವರು ಪತ್ರಿಕೋಧ್ಯಮ, ಕನ್ನಡ ಭಾಷಾಧ್ಯಯನ, ಶಾಸನಶಾಸ್ತ್ರ, ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲಮಾ ಮಾಡಿದ್ದಾರೆ.
ಉಪನ್ಯಾಸಕರಾಗಿ ಹಲವು ಕಡೆ ಕಾರ್ಯನಿರ್ವಹಿಸಿರುವ ನಟರಾಜು ಅವರು ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಲ್ಲಿ ಪೂರ್ಣಕಾಲಿಕ ಅಥಿತಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಳದ ಓದು, ಮತ್ತು ಬರಹದ ಹವ್ಯಾಸವಿರುವ ನಟರಾಜ್ ಅವರು ‘ವ್ಯಕ್ತಿನಾಮ ಮತ್ತು ಶಾಸನಗಳ ಭಾಷಿಕ ಸಂಗತಿಗಳು’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.