ಮೀರಾ ಚಕ್ರವರ್ತಿ ಸಂಸ್ಕೃತ ಅಧ್ಯಾಪಕಿ ಮತ್ತು ಸಂಶೋಧಕಿ. 20-03-1949 ರಲ್ಲಿ ಜನಿಸಿದರು. ತಂದೆ ಎಂ.ಎಸ್. ಚಕ್ರವರ್ತಿ, ತಾಯಿ ಗೀತಾ.
ಜಿ-ರೋ ಪಾಯಿಂಟ್ ಎಂಬ ಕವನ ಸಂಕಲನವನ್ನೂ, ನಾಥ ಇದ್ ವನಾಥ್, ನಿಶೆಕುಟುಂಬ, ರಾಜ್ ನಗರ್, ಜೀವನಾನಂದರ ಕವಿತೆಗಳು ಇವುಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ದೇವನೂರು ಮಹಾದೇವರ ಕುಸುಮಬಾಲೆ ಕೃತಿಯನ್ನು ಬಂಗಾಲಿಗೆ ಅನುವಾದಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.
Landscape of mother, Women and Nation Building ಕೃತಿಗಳ ಸಂಪಾದನೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬೌದ್ಧ ದರ್ಶನ ಸಮ್ಮೇಳನ, ಫಿನ್ ಲ್ಯಾಂಡ್ ನಲ್ಲಿ ಜರುಗಿದ ಈರೋಪಿಯನ್ ದರ್ಶನ ಮತ್ತು ವೈದ್ಯಕೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಬಂಗಾಲಿ ಭಾಷೆಯ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡ ಕೃತಿಗಳನ್ನು ಬಂಗಾಲಿಗೆ ಅನುವಾದಿಸಿದ್ದಾರೆ. ಕರ್ನಾಟಕ ಮಹಿಳಾ ಆಯೋಗದ ಮಾಜಿ ಸದಸ್ಯೆಯಾಗಿ, ಕೇರಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಯಾಗಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೆಹಲಿಯ ಮಾಜಿ ಸದಸ್ಯೆಯಾಗಿ, ಮತ್ತು ’ಮಾನಿನಿ’ ಮಹಿಳಾ ಸಂಘದ ಅಧ್ಯಕ್ಯೆಯಾಗಿ ಗೌರವ ಹುದ್ದೆಗಳನ್ನು ನಿರ್ವಹಿಸಿದ್ದಾರೆ.