ಎಸ್. ಬಿ. ವಸಂತರಾಜಯ್ಯ ಅವರು 1924 ಸೆಪ್ಟಂಬರ್ 13 ಮೈಸೂರು ಜಿಲ್ಲೆ ಕೆ ಆರ್ ನಗರ ಸಾಲಿಗ್ರಾಮದಲ್ಲಿ ಜನಿಸಿದರು. ತಂದೆ: ಎಸ್. ಬಿ. ಬ್ರಹ್ಮದೇವಯ್ಯ. ತಾಯಿ: ಸರಸ್ವತಮ್ಮ. ಹಲವಾರು ಜೈನ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
`ನಿಷ್ಕಾಮ ಯೋಗಿ - ಕಿರು ಕಾದಂಬರಿ, `ಅಹಿಂಸಾ ಜ್ಯೋತಿ ಮಹಾವೀರ’, ‘ಹೇಮಚಂದ್ರ’ - ಜೀವನ ಚರಿತ್ರ, `ಶ್ರವಣಬೆಳಗೊಳದಿಂದ ಕೊಪ್ಪಳ’ - ಪ್ರಾಚೀನ ಕ್ಷೇತ್ರಗಳ ಪರಿಚಯ, `ಅಷ್ಟಪಾಹುಡ’ - ಅನುವಾದ, ‘ನಿತ್ಯ ವಸಂತ’ - ಲೇಖನಗಳು, `ಚಂದನಾ’ - ನಾಟಕ, ‘ತೀಥ೯ವಂದನೆ’ - ಪ್ರವಾಸ ಕಥನ, ಮುಂತಾದ ಇಪ್ಪತ್ತು ಕೃತಿಗಳ ಲೇಖಕರು.
ಸ್ವಾತಂತ್ರ ಯೋಧರೂ ಹೌದು. ಉತ್ತಮ ವಾಗ್ಮಿಗಳಾಗಿದ್ದರು. 80 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಎಸ್ ಬಿ ವಸಂತರಾಜಯ್ಯ ಅಭಿನಂದನಾ ಸಮಿತಿಯು ಬೆಂಗಳೂರಿನಲ್ಲಿ "ಸುಮಾ ವಸಂತ "ಎಂಬ ಅಭಿನಂದನಾ ಗ್ರಂಥ ಅರ್ಪಿಸಿದೆ. ‘ಹೊಂಬುಜ ಶ್ರೀ ಕ್ಷೇತ್ರದ ಸಿದ್ಧಾಂತಕೀರ್ತಿ ಪ್ರಶಸ್ತಿ, ಜೈನ್ಸ ಆಫ್ ಅಮೇರಿಕಾ ಗಿಲ್ಡ್ JAG ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.