ಕೆ. ಗೋಕುಲನಾಥ್ ಅವರು ಮೈಸೂರಿನವರು. ಸ್ನಾತಕೋತ್ತರ ಪದವೀಧರರು ದಾಸ ಸಾಹಿತ್ಯದ ಹಿರಿಯ ಸಂಶೋಧಕ. ‘ವಿಜಯದಾಸರ ಜೀವನ ಮತ್ತು ಕೃತಿಗಳ ಸಮೀಕ್ಷೆ’ ಗೋಕುಲನಾಥರ ಪಿಎಚ್.ಡಿ ಅಧ್ಯಯನದ ವಿಷಯ. ದಾಸ ಸಾಹಿತ್ಯದ ದಾಖಲೀಕರಣ ಮತ್ತು ಪ್ರಚಾರವನ್ನೇ ಬದುಕಿನ ಮಾರ್ಗವಾಗಿಸಿ ಕೊಂಡಿರುವರು. .ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ದಾಸ ಸಾಹಿತ್ಯ ರಚನೆ, ಪ್ರವಚನ, ಪ್ರಬಂಧ ಮಂಡನೆ, ಉಪನ್ಯಾಸಗಳೇ ಇವರ ಬದುಕಿನ ನಡೆ. 19 ಕೃತಿಗಳನ್ನು ರಚಿಸಿದ್ದು, ರಾಷ್ಟ್ರ-ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ 100ಕ್ಕೂ ಅಧಿಕ ಪ್ರಬಂಧಗಳ ಮಂಡಿಸಿದ್ದಾರೆ. ಕೀರ್ತನ ಕಮ್ಮಟಗಳ ಆಯೋಜನೆ, 25ಕ್ಕೂ ಹೆಚ್ಚು ಉಪನ್ಯಾಗಳು, 76 ಪುಸ್ತಕ ವಿಮರ್ಶೆ, ಸಮಗ್ರ ದಾಸಸಾಹಿತ್ಯ ಯೋಜನೆಯ ಸಂಪಾದಕತ್ವದಲ್ಲಿಯೂ ಆಸಕ್ತಿ.
ಕೃತಿಗಳು : ಹರಿದಾಸರ ಸಮಾಜಮುಖಿ ಚಿಂತನೆಗಳು ಸಂಪುಟ-2, ಶ್ರೀ ವ್ಯಾಸರಾಯರು ಜೀವನ ಮತ್ತು ಕೃತಿಗಳ ಸಮೀಕ್ಷೆ.
ಪ್ರಶಸ್ತಿ-ಪುರಸ್ಕಾರಗಳು: ‘ಕನಕ ಶ್ರೀ’ ಪ್ರಶಸ್ತಿ ಲಭಿಸಿದೆ. .