ಲೇಖಕ ವಾಸುದೇವ ಬಡಿಗೇರ ಅವರು ಮೂಲತಃ ಹೊಸಪೇಟೆಯವರು. 1968 ಜೂನ್ 1ರಂದು ಜನನ. ಅವರು ಎಂ.ಎ.(ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ), ಎಂ.ಎ. (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ್ಫ) ಎಂ.ಫಿಲ್., ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಫಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಇತಿಹಾಸ, ಪುರಾತತ್ವಶಾಸ್ತ್ರ, ಸಂಸ್ಕೃತಿ ಕಲೆ ಮತ್ತು ವಾಸ್ತು ಶಿಲ್ಪ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ.
ಕೃತಿಗಳು: ಸಂಡೂರು ಪರಿಸರದ ಕಾರ್ತಿಕೇಯ ತಪೋವನ, ಶಿರಸಂಗಿ ಕಾಳಮ್ಮ, ಕರ್ನಾಟಕ ದೇವಾಲಯ ಕೋಶ ವಿಜಾಪುರ ಜಿಲ್ಲೆ, ಕರ್ನಾಟಕ ದೇವಾಲಯ ಕೋಶ ಬಳ್ಳಾರಿ ಜಿಲ್ಲೆ, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-೫ ಬಸವನ ಬಾಗೇವಾಡಿ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಭಾಗ-೧, ಕರ್ನಾಟಕ ದೇವಾಲಯ ಕೋಶ : ಗುಲ್ಬರ್ಗ ಜಿಲ್ಲೆ