About the Author

ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್‌ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ.  

ಕೃತಿಗಳು: ಹಾಲುಮತದ ಹಿರಿಮೆ ವಿಜಯನಗರ ಸಾಮ್ರಾಜ್ಯ, ದಳವಾಯಿ, ಹಾಲುಮತ ಸಂಸ್ಕೃತಿ, ಕರ್ನಾಟಕ ವಿಜಯನಗರ ಸಾಮ್ರಾಜ್ಯ, ಹಾಲುಮತ ಪರಂಪರೆ ಸಂಪುಟ-1, ಮೈಲಾರಲಿಂಗೇಶ್ವರ, ಬೀರದೇವರು,  ಬಳ್ಳಾರಿ ಪರಿಸರದ ಹಾಲುಮತ ದೈವಗಳು.

 

 

ಲಿಂಗದಹಳ್ಳಿ ಹಾಲಪ್ಪ

(03 Feb 1958)