ಹಿಂದೂಸ್ತಾನಿ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಾಯನ ಪರಂಪರೆಯ ನೆಲೆ ನಿಲುವುಗಳು’ ವಿಷಯವಾಗಿ ಪಡೆದ ಪಿಎಚ್ ಡಿ ಮಹಾಪ್ರಬಂಧದ ಕೃತಿ-‘ಕೇಡಿಲ್ಲವಾಗಿ ಹಾಡುವೆ’. 12ನೇ ಶತಮಾನಗಳ ಶರಣರ ವಚನಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕಳಕಳಿಗಳನ್ನು, ಸಂಶೋಧಿಸಿದ ಹೊಳವುಗಳನ್ನು ಇಲ್ಲಿ ನೀಡಲಾಗಿದೆ. ವಚನಗಳು ಗಾಯನ ರೂಪು ತಳೆದಿದ್ದು, ತೀರಾ ತಡವಾಗಿ. ಅವುಗಳನ್ನು ಗಾಯನಕ್ಕೆ ಇಳಿಸಿದ ಸಂಗೀತಗಾರರ ಪೈಕಿ ಡಾ. ಮಲ್ಲಿಕಾರ್ಜುನ ಮನ್ಸೂರ ಅವರು ಮೊದಲಿಗರು. ಹೀಗೆ ವಚನ ಗಾಯನಗಳ ಪರಂಪರೆಯ ವಿಸ್ತೃತ ಚಿತ್ರಣ ನೀಡುವ ಕೃತಿ ಇದು.
©2024 Book Brahma Private Limited.