ಉತ್ತರ ಕನ್ನಡ ಜಿಲ್ಲೆಯ ಹಳ್ಳೇರ್ ಸಮುದಾಯವು ಜಾತಿ ತಾರತಮ್ಯದ ಷಡ್ಯಂತರದಿಂದ ಕೆಳಸ್ಥರಕ್ಕೆ ದೂಡಲ್ಪಟ್ಟ ಅಲಕ್ಷಿತ ಸಮುದಾಯ. ಈ ಸಮುದಾಯದ ಜನರು ಸಮುದ್ರದ ಅಂಚಿನ ಘಜನಿ ಉಪ್ಪು ಮತ್ತು ಸಿಹಿನೀರಿನ ಮಿಶ್ರಣದ ಭೂಮಿಯಲ್ಲಿ ಆಳರಸದ ಕೆಳಗೆ ಸೈನಿಕರಾಗಿ ಭತ್ತ ಬೆಳೆದು ಬದುಕು ಸವೆಸಿದ್ದಾರೆ. ಈ ಸಮುದಾಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಲೇಖಕರು ಈ ಸಮುದಾಯದ ಚಾರಿತ್ರಿಕ ಹಿನ್ನೆಲೆ, ಮೌಖಿಕ ಸಾಹಿತ್ಯ, ಸಾಂಸ್ಕೃತಿಕ ಆಚರಣೆಗಳು, ಶೈಕ್ಷಣಿಕ, ಆರ್ಥಿಕ, ಸಮಾಜಿಕ ಸ್ಥಿತಿಗತಿಗಳ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ಧಾರೆ.
©2024 Book Brahma Private Limited.