ನಾಲ್ಕು ಭಾಗಗಳಲ್ಲಿ ಹರಡಿರುವ ’ಹಳಗನ್ನಡ- ಭಾಷೆ ಭಾಷಾ ವಿಕಾಸ ಭಾಷಾ ಬಾಂಧವ್ಯ ಅಧ್ಯಯನ’ 18 ವಿದ್ವಾಂಸರ 32 ಪ್ರಬಂಧಗಳ ಸಂಕಲನ. 2,200 ಶಾಸನಗಳನ್ನು ಅಧ್ಯಯನ ಮಾಡಿ ಸಂಕಲನವನ್ನು ರೂಪಿಸಲಾಗಿದೆ.
ಕೃತಿ ಕುರಿತು ಲೇಖಕ ಷ ಶೆಟ್ಟರ್ - ’ಈ ಅಧ್ಯಯನದ ವೈಶಿಷ್ಟ್ಯವೆಂದರೆ ಈವರೆಗೂ ನಿಲುಕದಷ್ಟು ಸಂಖ್ಯೆಯ ಹಳಗನ್ನಡ ಶಾಸನಗಳನ್ನು ಬಳಸಿಕೊಂಡಿರುವುದು; ಇಂದಿನವರೆಗೂ ಚರ್ಚಿಸದಿರುವ ಕೆಲವು ವಿಷಯಗಳ ಕಡೆ ಮೊದಲ ಬಾರಿಗೆ ಗಮನ ಹರಿಸಿರುವುದು; ಹಿಂದೆಂದೂ ಹಂಚಿಕೊಳ್ಳದಷ್ಟು ಸಂಖ್ಯೆಯ ವಯೋವೃದ್ಧರೂ ಜ್ಞಾನವೃದ್ದರೂ ವೇದಿಕೆಯನ್ನು ಹಂಚಿಕೊಂಡಿರುವುದು, ಹಳಗನ್ನಡ ಭಾಷೆಯ ಸರ್ವತೋಮುಖ ಚರ್ಚೆ ಇಲ್ಲಿ ಆಗಿದೆ ಎಂದರೆ ಅದು ಉತ್ತೇಕ್ಷೆಯ ಮಾತಾಗಬಹುದು; ಆದರೆ ಅಧ್ಯಯನಕ್ಕೊಳಪಡಿಸಿಕೊಂಡ ಕ್ಷೇತ್ರಗಳ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ ಎಂದು ಹೇಳಲು ಹಿಂಜರಿದರೆ ಕೃತ್ರಿಮ ಸೌಜನ್ಯವೆನಿಸಬಹುದು. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರೂ, ತಮ್ಮ ಪ್ರತಿಭೆಯ ಮೂಲಕ ಈ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸುವ ಭರವಸೆ ಮೂಡಿಸುವ ಯುವಕರು, ನನ್ನೊಡನೆ ಸಹಕರಿಸದಿದ್ದರೆ ಈ ಅಧ್ಯಯನವು ಈಗಿನ ಗುಣಮಟ್ಟವನ್ನು ಪಡೆದುಕೊಳ್ಳುತ್ತಿರಲಿಲ್ಲ ಎನ್ನುವುದಂತೂ ನಿಜ...’ ಎಂದಿದ್ದಾರೆ.
©2024 Book Brahma Private Limited.