ಮೊದಲ ನುಡಿ, ಮುನ್ನುಡಿ, ಪ್ರಸ್ತಾವನೆ ಇತ್ಯಾದಿ ಒಂದು ಕೃತಿಗೆ ಸಂಬಂಧಿಸಿದ ಮೊದಲ ಮಾತುಗಳನ್ನು, ಕೃತಿಯ ವಸ್ತು, ರಚನೆಯ ಉದ್ದೇಶ ಇತ್ಯಾದಿಗಳ ಹಿನ್ನೆಲೆಯಲ್ಲಿ ಆಯಾ ಲಿಕರೇ ದಾಖಲಿಸುವುದು ಅವಶ್ಯಕ ಎಂದು ನಂಬಿರುವವನು ನಾನು, ಆದರೆ ಕೆಲವು ಬಾರಿ ಕೃತಿಕಾರರ ಮತ್ತು ಕೃತಿಯ ಪರಿಚಯದ ಸಲುವಾಗಿ ಕೃತಿಕಾರರನ್ನು ಬಲ್ಲ ಹಾಗೂ ಕೃತಿಯನ್ನು ಓದಿದ ಒಬ್ಬ ವ್ಯಕ್ತಿಯಿಂದ ಮುನ್ನುಡಿ ಬರೆಸುವ ಅಭ್ಯಾಸ ಇದೆ. ಬಹುತೇಕ ಅದೇ ಕಾರಣದಿಂದ ನನಗೆ ಈ ಮುನ್ನುಡಿ ಬರೆಯುವ ಅವಕಾಶ ದೊರೆತಿದೆ ಎಂದು ತಿಳಿದಿದ್ದೇನೆ. ಈ ಬರವಣಿಗೆಯ ಆರಂಭದಲ್ಲೇ ನಾನು ತಿಳಿಸಿದಂತೆ ಲೇಖಕಿಯು ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯ, ಶಾಸನ ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳನ್ನು ಕುರಿತು ಲೇಖನಗಳನ್ನು ಪ್ರಸ್ತುತ ಪಡಿಸಿದ್ದಾರೆ. ಜನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಲೇಖಕಿಯಲ್ಲಿರುವ ಸಂಶೋಧಕಿ ಕೆಲಸ ಮಾಡಿದ್ದಾಳೆ, ಉಳಿದ ವಿಷಯಗಳಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಪರಿಚಯದ ಕೆಲಸ ಮಾತ್ರ ನಡೆದಿದೆ, ಅಂತಹ ಕೆಲಸಗಳಿಗೆ ಇತಿ ಮಿತಿ ಇದ್ದೇ ಇರುತ್ತದ ಆದ್ದರಿಂದ ಇದು ಸಂಶೋಧಕಿಯ ದೌರ್ಬಲ್ಯ ಎಂದು ಹೇಳುವುದು ಸಾಧ್ಯವಿಲ್ಲ, ಯಾವ ಸಂದಭ ಎಂತಹ ಓದುಗ, ಕೇಳುಗರಿಗಾಗಿ ಲೇಖಿನ ಸಿದ್ಧವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಯಾವದೇ ಸಂಶೋಧಕ ಲೇಖಕರಿಗೆ ಆರಂಭದ ದಿನಗಳಲ್ಲಿ ಇಂತಹ ಸಂದಿಗ್ಧಗಳು ಇದ್ದೇ ಇರುತ್ತದೆ ಅಂತಹ ಸಂದಿಗ್ಧಗಳನ್ನು ಸಲೀಸಾಗಿ ದಾಕ್ಕೆ ಗಟ್ಟಿಯಾಗುತ್ತಾ ಹೋದರೆ ನಿಜವಾದ ಸಂಶೋಧಕ ಸಂಶೋಧನೆ ಪ್ರಕಟಗೊಳ್ಳುವುದು ಕಷ್ಟವಲ್ಲ ಎಂದು ಡಾ.ಎಚ್. ಎಸ್ ಗೋಪಾಲ್ ರಾವ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.