ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ

Author : ನಾಗೇಂದ್ರ. ಪಿ

Pages 140

₹ 150.00




Year of Publication: 2021
Published by: ಸಂಗೀತ ಪ್ರಕಾಶನ
Address: ಗ್ರಾಮ ಯಲಿವಾಳ, ಅಂಚೆ ಮತ್ತು ತಾಲೂಕು ರಟ್ಟೀಹಳ್ಳಿ, ಜಿಲ್ಲೆ ಹಾವೇರಿ- 591116

Synopsys

‘ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ’ ಲೇಖಕ ನಾಗೇಂದ್ರ. ಪಿ ಅವರ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘12ನೇ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯಲ್ಲಿ ಬಹುಮುಖ್ಯ ಸಮಾಜ ಸುಧಾರಕರಾಗಿ ಶರಣ ಸಂಸ್ಕೃತಿಯಲ್ಲಿ ಮೊದಲಿಗ ಬಸವಣ್ಣನವರು. ಸಮಸಮಾಜ ನಿರ್ಮಾಣ ಮಾಡುವ ಕನಸು ಕಂಡವರು. ಅದಕ್ಕಾಗಿ ತಳವರ್ಗದವರನ್ನು ಅಪ್ಪಿಕೊಂಡರು, ಅವರನ್ನೇ ತನ್ನ ತಂದೆ ಎನ್ನುವುದರ ಮೂಲಕ ಸಾಮಾಜಿಕ ಪ್ರಜ್ಞೆಯ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಪ್ರಯತ್ನಿಸಿದವರು. ಇಂತಹದೇ ಬಸವಣ್ಣನವರ ವಚನಗಳನ್ನು ಎತ್ತಿಕೊಂಡು ನಾಗೇಂದ್ರ ಪಿ ಅವರು ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ ಎಂಬ ಕೃತಿಯ ಮೂಲಕ ತಾವು ಜನ್ಮತಾಳಿದ ವರ್ಗದ ಬಗ್ಗೆ ಗೌರವ ಮತ್ತು ನಂಬಿಕೆಯನ್ನಿಟ್ಟುಕೊಂಡು ಭಾರತದಲ್ಲಿ ಆಕಸ್ಮಿಕವಾಗಿ ಬಂದ ವರ್ಗ ಸಂಘರ್ಷ ಅಥವಾ ಜಾತಿ ಸಂಘರ್ಷದ ಬಗ್ಗೆ ಯಾವುದೇ ರೀತಿಯ ದ್ವೇಷಕಾರದೇ ಪ್ರೀತಿಯಿಂದ, ಸಹಮತದಿಂದ ಪರಿಹಾರ ಮಾಡಬೇಕು ಎಂಬ ಬಸವಣ್ಣನವರ ಉನ್ನತ ಆದರ್ಶಗಳನ್ನು ಬಸವಣ್ಣನವರದೇ ಮಾತುಗಳಲ್ಲಿ ಮಾದಾರ ಚೆನ್ನಯ್ಯನವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಉಲ್ಲೇಖ ಮಾಡುತ್ತಾ ತಮ್ಮ ಭಾವನೆಗಳನ್ನು ಪ್ರಸ್ತುತಪಡಿಸಿರುವುದು ಒಂದು ಅದ್ಭುತ ಪರಿಕಲ್ಪನೆ ಎಂದಿದ್ದಾರೆ ಡಿ.ಹೆಚ್. ಶಂಕರಮೂರ್ತಿ ಜೊತೆಗೆ ಇಂತಹ ವಿಚಾರಗಳ ಮೂಲಕ ಮೂಡಿಬಂದಿರುವಂತಹ ಒಂದು ಸಮಗ್ರ ಕೃತಿ, ಇಂದನ್ನು ತುಂಬು ಹೃದಯದಿಂದ ಎಲ್ಲರೂ ಸ್ವಾಗತಿಸಬೇಕು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ನಾಗೇಂದ್ರ. ಪಿ
(23 May 1986)

ಲೇಖಕ ನಾಗೇಂದ್ರ. ಪಿ ಅವರು ಮೂಲತಃ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಯಲಿವಾಳ ಗ್ರಾಮದವರು. ತಂದೆ-ಪಕ್ಕೀರಪ್ಪ ಚಿಕ್ಕಪ್ಪನವರ, ತಾಯಿ- ರೇಣುಕಮ್ಮ ಚಿಕ್ಕಪ್ಪನವರ. ಸದ್ಯ ಮುಂಡಗೋಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ.ಪಿ.ಟಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ ಅವರು ‘ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ’ ಎಂಬ ಸಂಶೋಧನಾತ್ಮಕ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯು 07-01-2022ರಂದು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಯುವಬರಹಗಾರರ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಗೊಂಡಿದೆ. ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದು ‘ಆಧುನಿಕ ...

READ MORE

Related Books