'ಅಧ್ಯಯನದ ವಿಧಿವಿಧಾನಗಳು' ಅಧ್ಯಯನಾಸಕ್ತರು ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ವಿವರಿಸುವ ಕೃತಿ.
ಈ ಕೃತಿ ಮೂರು ಭಾಗಗಳಲ್ಲಿ ಸಂಯೋಜನೆಗೊಂಡಿದೆ. ಮೊದಲನೆಯ ಭಾಗದಲ್ಲಿ ಅಧ್ಯಯನದ ಅರ್ಥ, ಸ್ಥಿತಿಗತಿ, ಸಮಸ್ಯೆ, ಪ್ರಬಂಧದ ತಾಂತ್ರಿಕ-ತಾತ್ವಿಕ ಕುರಿತಾದ ’ವೈಧಾನಿಕತೆ’ಯನ್ನು, ಎರಡನೆಯ ಭಾಗದಲ್ಲಿ , ಅಧ್ಯಯನದಲ್ಲಿ ಅಳವಡಿಸಿಕೊಳ್ಳಬಹುದಾದ ಶಿಸ್ತುಗಳನ್ನೊಳಗೊಂಡ ’ಅನ್ವಯಿಕತೆ’ ಹಾಗೂ ಮೂರನೇ ಭಾಗದಲ್ಲಿ ನಾಡಿನ ಸಂಶೋಧಕರಾದ ಕಪಟರಾಳ, ಶಂಬಾ, ಗೋವಿಂದ ಪೈ, ಎಂ.ಎನ್. ಶ್ರೀನಿವಾಸ್ ಅವರ ವೈಧಾನಿಕತೆಯನ್ನೊಳಗೊಂಡ ’ಪ್ರಾಯೋಗಿಕತೆ’ಯನ್ನು ಸಂಪಾದಿಸಲಾಗಿದೆ.
©2024 Book Brahma Private Limited.