ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ದಶಕವಾದ 1970 ಲಂಕೇಶರ ವಿಶಿಷ್ಟ ಭಾಗವೂ ಹೌದು. ಲಂಕೇಶರ ಈ ದಶಕದ ಸಾಹಿತ್ಯ, ರಂಗಭೂಮಿ, ಪತ್ರಿಕೆ, ಸಾಮಾಜಿಕ ಚಟುವಟಿಕೆಗಳಲ್ಲಿ ಆ ಕಾಲದಲ್ಲಿ ಅವರೊಂದಿಗಿದ್ದ ಮೋಹನ್ ರಾಂಥ ಆಸ್ತಿಯ ಒಡನಾಟವೇ ಈ ಪುಸ್ತಕದ ತರಕ ಶಕ್ತಿ. ಲಂಕೇಶರ ಸಾಹಿತ್ಯಕ ಶ್ರೇಷ್ಠತೆಯನ್ನು ಈ ಪುಸ್ತಕ ಒಳಗೊಳ್ಳದಿದ್ದರೂ ಅವರ ಬದುಕು, ಆಸಕ್ತಿ, ಅತಿರೇಕ, ಸ್ವಭಾವ- ಮೂಡುಗಳು, ಚುತಿ, ಚಪಲಗಳು ಸಹ ಅಷ್ಟೇ ಮುಖ್ಯವೆಂದು ನಂಬಿರುವ ಮೊಹನ್ರಾಂ ಇಲ್ಲಿ ರೂಪಿಸಿರುವುದೂ ಅದನ್ನೇ. ಸಂಸ್ಕೃತಿಯ ಕಾಲವೊಂದರ ದಾಖಲೆ ಇದು ಎಂಬುದು ಅವರ ಸಮರ್ಥನೆ. ಒಂದಂತೂ ನಿಜ. ಬಳಸುವ ಭಾಷೆ, ವಿಚಾರಗಳ ಬೌದ್ಧಿಕ ಭಾರದಿಂದ ಕುಸಿಯಕೂಡದು, ಅದನ್ನು ಹೇಳುವ ಕ್ರಷ್ಣು ಸೇರ, ಸರಳ, ಚಿತ್ರ ಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್ ರಾಂ ಅದನ್ನು ಮುಂದುವರೆಸಿದ್ದಾರೆ.
©2024 Book Brahma Private Limited.