ಕರ್ನಾಟಕ ರಾಜ್ಯದ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರ ಕೃತಿ-ವಕೀಲರೊಬ್ಬರ ವಗೈರೆಗಳು. ವಕೀಲಿ ವೃತ್ತಿಯಲ್ಲಿ ಕಂಡುಂಡ ತಮ್ಮ ಅನುಭವಗಳನ್ನು, ಆ ಮೂಲಕ ಕಂಡ ಸೂಕ್ಷ್ಮ ಒಳನೋಟಗಳನ್ನು ದಾಖಲಿಸಿದ ಅನುಭವ ಕಥನವಿದು. ರೈತಪರ, ಕನ್ನಡ ಪರ ಹೋರಾಟಗಾರರ ಮೇಲೆ ಸರ್ಕಾರ ಹಾಕಿರುವ ಪ್ರಕರಣಗಳನ್ನು ಆದ್ಯತೆ ಮೇರೆಗೆ ಸ್ವಯಂ ಆಸಕ್ತಿಯಿಂದ ತೆಗೆದುಕೊಂಡು ಅವರಿಗೆ ನ್ಯಾಯ ದೊರಕಿಸುವಲ್ಲಿ ಇವರ ಸೇವೆಯು ಗಮನಾರ್ಹ. ಸಾಮಾಜಿಕ ಕಳಕಳಿಯ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದ ಹಿರಿಯ ವಕೀಲರ ಅನುಭವಗಳು ಕಿರಿಯ ವಕೀಲರಿಗೆ ಮಾತ್ರವಲ್ಲ; ಯಾವುದೇ ವೃತ್ತಿಯಲ್ಲಿರಲಿ, ಪ್ರತಿಯೊಬ್ಬರು ಸಲ್ಲಿಸಿಬೇಕಾದ ಸಾಮಾಜಿಕ ಹೊಣೆಗಾರಿಯನ್ನು ಎಚ್ಚರಿಸುವ ನಿಟ್ಟಿನಲ್ಲಿ ಅನುಭವಗಳು ದಾಖಲಾಗಿದ್ದನ್ನು ಈ ಕೃತಿ ತೋರುತ್ತದೆ.
©2025 Book Brahma Private Limited.