‘ಕಲಕತ್ತಾ ದಿನಗಳು’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಅನುಭವ ಕಥನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳನ್ನು ಹೀಗೆ ಪ್ರಸ್ತಾಪಿಸಲಾಗಿದೆ. ಕಲ್ಪಿಸಿಕೊಳ್ಳಿ, 1960ರ ದಶಕದಲ್ಲಿ ಓರ್ವ ಹೆಣ್ಣು ಮಗಳು, ಕೇಂದ್ರ ಸರಕಾರದ ಕೆಲಸ ಹಿಡಿದು, ಪತಿ ಮತ್ತು ಪುತ್ರನನ್ನು ಹಿಂದೆ ಬಿಟ್ಟು, ಎರಡು ಮೂರು ವರ್ಷಕ್ಕೆ ವರ್ಗ ಮಾಡಿದಲ್ಲಿಗೆಲ್ಲ, ಭಾರತದ ಉತ್ತರ-ದಕ್ಷಿಣ, ಪೂರ್ವ ಪಶ್ಚಿಮಕ್ಕೆ ಹೋಗಿ, ಕೆಲಸ ನಿಭಾಯಿಸುತ್ತಾಳೆ. ಆಕೆಯ ಪತಿ, ಪತ್ನಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಸಾವಿರಾರು ಮೈಲಿಗಳ ಅಂತರದಲ್ಲಿ ಅಗಲಿ ನಿಂತ ಈ ದಂಪತಿಗಳ ನಡುವೆ, ದಿನಕ್ಕೊಂದು ಪತ್ರ ಹರಿದು ಬಂದು, ಪ್ರೀತಿಯ ಸೇತುವೆಯಾಗುತ್ತದೆ, ಬದುಕಿನ ದಾಖಲೆಯಾಗುತ್ತದೆ. ಕನ್ನಡದ ಹಿರಿಯ ಲೇಖಕಿ, ಸಂಶೋಧಕಿ, ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಡಾ. ಜ್ಯೋತ್ಸ್ನಾ ಕಾಮತ್ ಅವರು, ಇಸವಿ 1977ರಿಂದ 1980ರವರೆಗಿನ ವರ್ಷಗಳನ್ನು ಕಲಕತ್ತೆಯಲ್ಲಿ ಕಳೆದರು. ‘ಕಲಕತ್ತಾ ದಿನಗಳನ್ನು’ ಓದುತ್ತಿದ್ದಂತೆ, ಕಾಲಯಂತ್ರದಲ್ಲಿ ಕುಳಿತು ಇತಿಹಾಸಕ್ಕೆ ಭೇಟಿ ಇತ್ತ ರೋಮಾಂಚನದ ಅನುಭವ. ಬಂಗಾಲದ ನೆಲದಲ್ಲಿ ಅಪರೂಪದ ಸಾಧಕರನ್ನು ಭೇಟಿಯಾದವರು, ಡಾ. ಜ್ಯೋತ್ಸ್ನಾ ಕಾಮತ್. ಸುಭಾಶ್ ಚಂದ್ರ ಬೋಸರ ಸ್ವಾತಂತ್ರ ಹೋರಾಟದ ಕರೆಗೆ ಓಗೊಟ್ಟು, ತನ್ನ 14ನೇ ವಯಸ್ಸಿನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ನನ್ನು ಗುಂಡಿಕ್ಕಿ ಕೊಂದ ಕ್ರಾಂತಿಕಾರಿ ಸುನೀತಿ ಚೌಧರಿ ಅವರನ್ನು ಕಂಡು ಮಾತಾನಾಡಿಸಿದರು! ವಿಸ್ಕೃತಿಗೆ ಸರಿದ ಘಟನೆಗಳನ್ನು, ಧೀಮಂತ ವ್ಯಕ್ತಿಗಳನ್ನು ಡಾ. ಜ್ಯೋತ್ಸ್ನಾ ಜೀವಂತವಾಗಿಸಿದ್ದಾರೆ. ಕಲಕತ್ತೆಯ ಸ್ಮಶಾನಗಳಲ್ಲೂ ಅಲೆದಾಡಿ, 18ನೇ ಶತಮಾನದ ಗೋರಿಗಳು ಹೇಳುವ ಕತೆಗಳನ್ನು ಸೆರೆಹಿಡಿದಿದ್ದಾರೆ. ನಮ್ಮ ನಡುವಿನ ಹಿರಿಯ ಚೇತನ ಡಾ. ಜ್ಯೋತ್ಸ್ನಾ ಕಾಮತ್, ಕಳೆದುಹೋದ ಚರಿತ್ರೆಗೆ ಕೊಂಡಿಯಾಗಿದ್ದಾರೆ. ಕೃತಿಯು 23 ಅಧ್ಯಾಯಗಳನ್ನು ಒಳಗೊಂಡಿದ್ದು, ಹಿನ್ನೆಲೆ, ಪಯಣದಲ್ಲಿ ನೆಲೆ ಸೇರಿದಾಗ, ಮಹಾನಗರ - ಮೊದಲ ನೋಟಗಳು, ಆಫೀಸಿನ ಒಳ, ಹೊರನೋಟಗಳು, ಕಾನುಪ್ರಿಯನ ಕಲ್ಪನೆಯ ಆಫೀಸ್ ರೂಮು, ಘಟಕ್‌ನ ಖೊಟ್ಟಿತನ!, ಸೂರಿನಾಮ್ ರೇಡಿಯೋ ಮುಖ್ಯಸ್ಥೆ, ಉಡುಗೊರೆಯ ಸಂದರ್ಭ, ವರ್ಗಾವರ್ಗಿಯ ಒಳನೋಟ, ಸಹವಾಸಿಗಳು, ಚಾರುಮತಿ, ಪ್ರಭಾವತಿ, ಮೀರಾಲಾಡ್, ಜುಡಿಥ್ ಪಾರ್ಕರ್, ಬೃಷ್ಟಿಪೊಡೆ ಟಾಪುರ್! ಟುಪುರ್!, ರವೀಂದ್ರ ಜಯಂತಿ, ‘ರಸ ಸಂದೇಶಕರು’ - ವಂಗಪಾಕ ದರ್ಶನ, ಪುಸ್ತಕ ಪ್ರೇಮಿಗಳು - ‘ಬೊಯ್ ಮೇಲಾ’, ರಾಪ್ಟ್ರೀಯ ಗ್ರಂಥಾಲಯ, ಆಶುತೋಷ್ ಮುಖರ್ಜಿ ಗ್ರಂಥಾಲಯ, ಪುಸ್ತಕ-ಮಿನಿಪತ್ರಿಕೆಗಳ ಜಗತ್ತು, ಪುಸ್ತಕ ಪ್ರೀತಿ, ಚರಿತ್ರೆಯ ಸಂಶೋಧನೆಯ ಎರಡು ಮುಖಗಳು, ಚರಿತ್ರೆಯ ಚಕ್ರವರ್ತಿ ಡಾ| ಆರ್.ಸಿ. ಮಾಜುಂದಾರರೊಡನೆ, ಬಂಗಾಲಿ ಸಂಶೋಧಕನ ಕರ್ನಾಟಕ ಇತಿಹಾಸ ಶೋಧ!, ಬಿಷ್ಲಪುರ, ಜೈರಾಮಬಾಟಿಗ, ಕಾಮಾರಪುಕುರ ಯಾತ್ರೆೆ್ರ, ಬಿಷ್ಲಪುರ, ಸರ್ಪನೃತ್ಯ, ಜೈರಾಮಬಾಟಿ - ಶ್ರೀಮಾತೆಯ ಜನ್ಮಸ್ಥಳ, ಕಾಮಾರಪುಕುರ - ಶ್ರೀರಾಮಕೃಷ್ಣ ಪರಮಹಂಸರ ಜನ್ಮಸ್ಥಳ, ಧಪಧಪಿಯ ಪಿಕ್‌ನಿಕ್, ಕ್ರಾಂತಿಕಾರಿ ಸುನೀತಿ ಚೌಧರಿ ಭೇಟಿ, ಸಹೋದ್ಯೋಗಿಗಳು, ಅಂಜಲಿ ಸರ್ಕಾರ್, ಸಹೋದ್ಯೋಗಿ ಸಹಕಾರ!, ಗ್ರಾಮ ನ್ಯಾಯ, ಕವಿಯ ಕಣ್ಣಲ್ಲಿ ತನ್ನವರು, ಸಂಗೀತಸರಸಿ ಸಮಾಜ ಮಹಾರಾಷ್ಟ್ರ (ಮಹಾ) ನಿವಾಸ - ಸಂಸ್ಕೃತಿ ದರ್ಶನ, ವಂಗೇತರಂ ಬಂಧುಗಳು,ಮಾರವಾಡಿ ಕುಟುಂಬವೊಂದರ ಅಂತಃಪುರ ನೋಟ, ಒಂದು ಪ್ರಾಯಶ್ಚಿತ್ತದ ಕತೆ, ಆಕಾಶವಾಣಿಯ ‘ಆಂದೋಲನ್’, ‘ಕುಲೀನತೆ’ಯ ನಾಡಿನಲ್ಲಿ, ವಂಗೀಯ ಭಗಿನಿಯರು, ಲೇಡಿ ರಾಣು ಮುಖರ್ಜಿ (1906-2000), ಮೈತ್ರೇಯಿ ದೇವಿ (1914-), ಆಶಾಪೂರ್ಣಾ ದೇವಿ (1909-1995), ಪೂರ್ವ ಬಂಗಾಲಿಗಳು, ಜೆ. ಎನ್. ರಾಯ್‌ರೊಡನೆ ಒಂದು ಬೆಳಗು, ನೆಲೆಗೊಂಡ ಪೂರ್ವಬಂಗಾಲಿಗಳು, ಪೂರ್ವಬಂಗಾಲ, ಬಾಂಗ್ಲಾದೇಶ - ಅಮಾರ್ ಸೋನಾರ್ ಬಾಂಗ್ಲಾ, ಕಲ್ಲು ಹೇಳಿದ ಕತೆಗಳು, ಸರ್ ವಿಲಿಯಂ ಜೋನ್ಸ್ (1746 - 1794), ರೋಸ್ ಐಯ್‌ಲ್ಮೇರ್ (1780 - 1800), ಬೇಗಂ ಜಾನ್ಸನ್ (1725 - 1812), ವಿಲಿಯಂ ಸ್ಪೀಕ್ (1741- 1757) ರಾಬರ್ಟ್ ಕಿಡ್ (1746 - 1793), ಹೆನ್ರಿ ಲೂಯಿ ವಿವಿಯನ್ ಡೀರೋಝಿಯೋ (1809 - 1831), ಮೈಕೇಲ್ ಮಧುಸೂದನ್ ದತ್ (1824 - 1873), ಮರಳಿಗೂಡಿಗೆ ಇವೆಲ್ಲಾವುಗಳು ಇದರಲ್ಲಿವೆ.
©2025 Book Brahma Private Limited.