ಕವಿ(ತೆ)ಯ ಕತೆ ಬಿ.ಆರ್. ಲಕ್ಷ್ಮಣರಾವ್ ಅವರ ಕೃತಿ. ಇದೊಂದು ವಿಶಿಷ್ಟ ಪ್ರಯೋಗ ಕವಿತೆಯ ರಚನೆಯ ಹಿಂದಿನ ಕತೆಯನ್ನು ಕವಿಯೇ ವಿವರಿಸಿರುವ ವಿಶೇಷ ಕೃತಿ, ಒಬ್ಬ ಲೇಖಕ ತಾನು ಇಟ್ಟ ಹೆಜ್ಜೆಗಳನ್ನು ಮರಳಿ ನೋಡುವ, ಅವು ಮೂಡಿಬಂದ ಸಂದರ್ಭಗಳನ್ನು ವಿವರಿಸುವ, ಸ್ವತಃ ತಾನೇ ಅವುಗಳ ಬೆಲೆ ಕಟ್ಟುವ ಈ ಕೆಲಸ ಕುತೂಹಲಕರ. ಇದು ಕವಿಯ ಜೀವನಕ್ಕೂ ಕವಿತೆಗೂ ಇರುವ- ಇಲ್ಲದ ಸಂಬಂಧಗಳಿಗೆ ಕನ್ನಡಿ ಹಿಡಿಯುತ್ತದೆ. ದಿನನಿತ್ಯದ ಅನುಭವಗಳಿಗೆ. ಭಾಷೆಯ ಗೆಳೆತನ ಮತ್ತು ಸೃಜನಶೀಲತೆಯ ಸಂಗಾತ ಸಿಕ್ಕಾಗ ನಡೆಯುವ ಪವಾಡಗಳು ಇಲ್ಲಿ ಸೆರೆಯಾಗಿವೆ.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE