‘ಮುಂಬಯಿ ಮಿಂಚು’ ಶ್ರೀನಿವಾಸ ಜೋಕಟ್ಟೆ ಅವರ ಅನುಭವಕಥನವಾಗಿದೆ.ಈ ಕೃತಿಯಲ್ಲಿ ಜೋಕಟ್ಟೆ ಅವರು ಮುಂಬೈಯಲ್ಲಿ ಕಂಡುಂಡ ಸಂಗತಿಗಳನ್ನು, ತನಗೆ ದಕ್ಕಿದ ಮಹಾನಗರವನ್ನು ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ಮುಂಬೈಯ ಇತಿಹಾಸ, ಕನ್ನಡದೊಂದಿಗೆ ಅದಕ್ಕಿರುವ ಕುತೂಹಲಕಾರಿ ನಂಟನ್ನು ವಿವರಿಸುತ್ತಾರೆ. ಅದಾದ ಬಳಿಕವೇ ಮುಂಬೈಯ ಋಣಾತ್ಮಕ, ಧನಾತ್ಮಕವಾಗಿರುವ ಒಂದೊಂದೇ ವೈಶಿಷ್ಟಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲದೇ ಅಲ್ಲಿನ ನಗರಗಳನ್ನು ಪರಿಚಯಿಸುವ ಲೇಖಕರು, ಮುಂಬೈಯಲ್ಲಿ ಟ್ರಾಮ್ ಯುಗ, ಮುಂಬೈಯ ಲೋಕಲ್ ರೈಲುಗಳು, ಸ್ಲಮ್ ಕ್ಷೇತ್ರ ಧಾರಾವಿ, ದಕ್ಷಿಣ ಮುಂಬೈಯ ವೈಭವ, ವಾಟ್ಸನ್ ಹೊಟೇಲ್, ಮುಂಬೈಯ ಅಸ್ಮಿತೆಗಳಾಗಿದ್ದ ಸಿನೆಮಾ ಟಾಕೀಸ್‌ಗಳು, ಮುಂಬೈಯ ಆರ್ಥಿಕತೆಗೆ ಅಫೀಮಿನ ಕೊಡುಗೆ, ಪಶ್ಚಿಮ ನಲಂದಾ ಕನ್ಹೇರಿ ಗುಹೆಗಳು, ಸಂಜಯ್‌ಗಾಂಧಿ ನೇಶನಲ್ ಪಾರ್ಕ್, ಅತಿ ದೊಡ್ಡ ಫುಟ್‌ಪಾತ್ ಬಜಾರ್ ‘ಫ್ಯಾಶನ್ ಸ್ಟ್ರೀಟ್’, ಮುಂಬೈಯ ಕುಖ್ಯಾತ ಚೋರ್‌ಬಝಾರ್, ಪಾರ್ಸಿಗಳ ಪ್ರಪಂಚ, ವಿಲ್ಸನ್ ಕಾಲೇಜ್ ಹೀಗೆ ಮೊಗೆದಷ್ಟೂ ಮುಗಿಯದ ವಿವರಗಳನ್ನು ಕೊಡುತ್ತಲೇ ಹೋಗುತ್ತಾರೆ. ಕೃತಿಯು ಕೇವಲ ಮುಂಬೈಯ ಮೇಲ್ಮೈ ಸಂಗತಿಗಳನ್ನು ಮಾತ್ರವಲ್ಲ, ಅದರೊಳಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಕುರಿತಂತೆಯೂ ಜನರಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತದೆ.
©2025 Book Brahma Private Limited.