‘ಮುಂಬಯಿ ದಿನಾಂಕ’ ವ್ಯಾಸರಾಯ ಬಲ್ಲಾಳ ಅವರ ಅನುಭವ ಕಥನವಾಗಿದೆ. ಹೆಜ್ಜೆ, ಹೇಮಂತಗಾನ, ಬಂಡಾಯದಂಥ ಜೀವಂತ ಕೃತಿಗಳನ್ನು ಕನ್ನಡಿಗರಿಗೆ ನೀಡಿದ ವ್ಯಾಸರಾಯ ಬಲ್ಹಾಳರು ಐವತ್ತಕ್ಕೂ ಹೆಚ್ಚು ವರ್ಷ ಮುಂಬಯಿಯಲ್ಲಿ ನೆಲೆಸಿದರು. ಅವರ ಅನುಭವಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
ಹೊಸತು- ಸೆಪ್ಟೆಂಬರ್ -2003
ಹೆಜ್ಜೆ, ಹೇಮಂತಗಾನ, ಬಂಡಾಯದಂಥ ಜೀವಂತ ಕೃತಿಗಳನ್ನು ಕನ್ನಡಿಗರಿಗೆ ನೀಡಿದ ವ್ಯಾಸರಾಯ ಬಲ್ಲಾಳರು ಐವತ್ತಕ್ಕೂ ಹೆಚ್ಚು ವರ್ಷ ಮುಂಬಯಿಯಲ್ಲಿ ನೆಲೆಸಿದ್ದರು. ತಮಗೆ ಉದ್ಯೋಗ ನೀಡಿ ಸೃಜನಶೀಲ ಲೇಖಕರಾಗಿ ರೂಪುಗೊಳ್ಳಲು ಸರ್ವವಿಧದಲ್ಲೂ ನೆರವಾದ ಮುಂಬಯಿಯನ್ನು ಅವರೆ೦ದಿಗೂ ಮರೆಯಲಾರರು. ಕಂಪೆನಿಯ ದಕ್ಷ ಆಡಳಿತಗಾರರಾಗಿ, ಲೇಖಕರಾಗಿ, ಪತ್ರಕರ್ತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಸ್ನೇಹಜೀವಿಯೂ ಆಗಿದ್ದ ಬಲ್ಲಾಳರು ತಮ್ಮ ಮುಂಬಯಿ ವಾಸದ ಅನುಭವಗಳನ್ನಿಲ್ಲಿ ಹೇಳಿಕೊಂಡಿದ್ದಾರೆ.
©2024 Book Brahma Private Limited.