‘ಕಾಟಿಹಳ್ಳದ ತಿರುವು’ ಶ್ರೀಧರ ಪತ್ತಾರ ಅವರು ಬರೆದಿರುವ ಫಾರೆಸ್ಟರ್ ನೊಬ್ಬನ ಅನುಭವ ಕಥನ. ಪುಸ್ತಕದ ಕುರಿತು ಬರೆದಿರುವ ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಪ್ರಶಾಂತ್ ಪಿ.ಕೆ.ಎಮ್ ಅವರು ಮಾತನಾಡಿದ ಗಿಡ-ಮರ ಮತ್ತು ವನ್ಯಜೀವಿಗಳ ಜೊತೆಗಿನ ಸಂಬಂಧದೊಂದಿಗೆ ಅರಣ್ಯ ಇಲಾಖೆಯ ಕರ್ತವ್ಯದಲ್ಲಿ ದಕ್ಕಿದ ಅನುಭವಗಳನ್ನು ಶ್ರೀಧರ ಪತ್ತಾರರವರು ಮನಮುಟ್ಟುವಂತೆ ಬರೆದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತಸದ ಸಂಗತಿ. ಇವರಿಂದ ಕಾಡಿನ ಕುರಿತು ಇನ್ನಷ್ಟೂ ಲೇಖನಗಳು ಹೊರಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಹಾಗೇ ಕೃತಿಯ ಕುರಿತು ಬರೆದಿರುವ ಡಾ.ರಾಜಶೇಖರ್ ಬಡಿಗೇರ ಅವರು ಇಲ್ಲಿನ ಲೇಖನಗಳು ಸರಳವಾಗಿಯೂ, ಕುತೂಹಲಕಾರಿ ದೃಷ್ಟಾಂತಗಳಿಂದ ನಿರೂಪಿತವಾಗಿವೆ. ಎಲ್ಲರಿಗೂ ಅನುಭವವೇದ್ಯವಲ್ಲದ ಒಂದು ಬಗೆಯ ವಿಶಿಷ್ಟ ಲೋಕವನ್ನು ನಮ್ಮೆದುರಿಗೆ ಬಿಚ್ಚಿಡುತ್ತವೆ. ಶ್ರೀಧರ ಪತ್ತಾರರವರು ಕಾಡಿನ ಅನುಭವಗಳನ್ನು ಕಥೆಗಳಾಗಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಡುತ್ತಿರುವುದು ಸಾಹಸವೇ ಸರಿ. ಮತ್ತು ಮೆಚ್ಚುಗೆಯ ವಿಷಯವೂ, ಇವರಿಂದ ಇಂತಹ ಇನ್ನಷ್ಟೂ ಕಾಡಿನ ಕಥನಗಳು ಹೊರಬರಲಿ, ಈ ಮೂಲಕ ಇವರು ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.
©2024 Book Brahma Private Limited.