ಈ ಕೃತಿಯಲ್ಲಿ ಹೊರನಾಡು, ಒಳನಾಡಿನ ಹತ್ತು ಹಲವು ಲೇಖಕರು ಹಲವು ದಶಕಗಳ ಹಿಂದೆ ತಾವು ಕಳೆದ ಕನ್ನಡ ಶಾಲೆಗಳ ಸವಿ ದಿನಗಳನ್ನು ಹಂಚಿಕೊಂಡಿ ದ್ದಾರೆ. ಸದ್ಯದ ಸಂದರ್ಭಕ್ಕೆ ನಮ್ಮೊಳಗಿನ ಕನ್ನಡತನಗಳನ್ನು ಮುಟ್ಟಿ ನೋಡುವ ಪ್ರಯತ್ನವಾಗಿ ಈ ಕೃತಿಯನ್ನು ಹೊರತರಲಾಗಿದ್ದು, ಇಂದು ಅಣಬೆಗಳಂತೆ ತಲೆಯೆತ್ತುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಯಂತ್ರಗಳಂತೆ ರೂಪುಗೊಳ್ಳುತ್ತಿರುವಾಗ, ಹಿಂದೆ ಕನ್ನಡ ಶಾಲೆಗಳಲ್ಲಿ ಮಕ್ಕಳು ಹೀಗೆ ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧಗಳನ್ನಿಟ್ಟು ಸಹಜವಾಗಿ ಅರಳುತ್ತಿದ್ದರು ಎನ್ನುವುದನ್ನು ಇಲ್ಲಿರುವ ಪ್ರತೀ ಬರಹಗಳು ಹೇಳುತ್ತವೆ. ಕನ್ನಡ ಶಾಲೆಗಳೇ ಇಲ್ಲದ ಕರ್ನಾಟಕವೊಂದು ರೂಪು ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಈ ಹಿರಿಯರ ಹಳೆ ನೆನಪುಗಳು ನಮ್ಮತನವನ್ನು ತಟ್ಟೆ ಎಚ್ಚರಿಸುತ್ತವೆ. ಕನ್ನಡ ಶಾಲೆಗಳ ಕುರಿತಂತೆ ಇಲ್ಲಿ ಸುಮಾರು 87 ಲೇಖನಗಳಿವೆ.
©2025 Book Brahma Private Limited.