ಸ್ವಅನುಭವಗಳಿಗೆ ಅಕ್ಷರದ ರೂಪು ಕೊಟ್ಟಿರುವ ಲೇಖಕ ಚಂದ್ರಶೇಖರ ಗಂಧವನಹಳ್ಳಿ ಅವರು ತಮ್ಮ ಜೀವನಾನುಭವದ ಸ್ಮರಣೀಯ ಘಟನಾವಳಿಯನ್ನು ಇಲ್ಲಿ ನೀಡಿದ್ದಾರೆ. ಲೇಖಕರು ಇಲ್ಲಿ ಅನಾಥರ ಕುರಿತಾದ ಅನೇಕ ಹಿಡನ್ ಹಾಗೂ ಓಪನ್ ಸೀಕ್ರೆಟ್ ಗಳ ಬಗ್ಗೆ ಹೇಳುವುದರ ಮೂಲಕ ಅನಾಥರ ನಿಜವಾದ ಸಮಸ್ಯೆಗೆ ಕಾರಣ ಮತ್ತು ಅದಕ್ಕೆ ಪರಿಹಾರವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಕೃತಿಗೆ ಆಶಯ ನುಡಿ ಬರೆದಿರುವ ಲಂಕೇಶ್ ದೇವನ್ ಅವರು “ಈ ಕೃತಿಯಲ್ಲಿ ಲೇಖಕರು ಅನಾಥರು ಮತ್ತು ಅವರ ರಕ್ಷಕರ ಕುರಿತಾದ ಅನೇಕ ಹಿಡನ್ ಮತ್ತು ಓಪನ್ ಸೀಕ್ರೆಟ್‌ಗಳ ಬಗ್ಗೆ ಹೇಳುವ ಮೂಲಕ ಸತ್ಯವನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವ ತುರ್ತು ನಮ್ಮದು ಎಂಬುದು ನಿಸ್ಸಂಶಯ” ಎಂದಿದ್ದಾರೆ.
ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರು ಮೈಸೂರು ಜಿಲ್ಲೆ ಕೆ.ಆರ್. ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸುರೇಶಾಚಾರಿ. ತಾಯಿ ಮೀನಾಕ್ಷಿ. ಮೂಲತಃ ರೈತ ಕುಟುಂಬದವರಾದ ಚಂದ್ರಶೇಖರ ಅವರು ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ವಿಜಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಣೆ. ಸಾಹಿತ್ಯ - ಓದು - ಬರೆವಣಿಗೆಯಲ್ಲಿ ಆಸಕ್ತಿ. ಸಮಾಜದ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸಿ ಲೇಖನ ಹಾಗೂ ಕವನದ ಮೂಲಕ ಸ್ಪಂದಿಸುವ ಸಹೃದಯತೆ ಅವರದ್ದು. ‘ಅನಾಥ’ ಅವರ ಚೊಚ್ಚಲ ಕೃತಿ. ...
READ MORE